ವಿಜಯಪುರ: ವಯಸ್ಸಿನ ಕಾರಣಕ್ಕೆ ಬಿಜೆಪಿಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲ್ಲ ಎಂಬ ಗೊಂದಲಕ್ಕೆ ಹಾಲಿ ಸಂಸದ ರಮೇಶ ಜಿಗಜಿಣಗಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಜಿಗಜಿಣಗಿ, ನಾನಂತೂ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಪಕ್ಷದ ಟಿಕೆಟ್ ಸಿಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಚುನಾವಣೆಗೆ ತಯಾರಿ ಮಾಡಿಕೊಳ್ಳಿ ಎಂದಿದ್ದಾರೆ. ನನಗೆ ಟಿಕೆಟ್ ವಿಶ್ವಾಸ ಇದೆ. ಲೋಕಸಭೆ ಚುನಾವಣೆಗೆ ನನಗೆ ಟಿಕೆಟ್ ಕೊಡೋದು ನಮ್ಮ ಪಕ್ಷದವರು ನನಗೆ ಟಿಕೆಟ್ ಕೊಡಲ್ಲ ಎಂದು ಹೇಳಲು ಎಂ.ಬಿ.ಪಾಟೀಲ ಯಾರು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಉಚಿತ ಯೋಜನೆಗಳ ವಿರುದ್ಧ ಮತ್ತೆ ಕಿಡಿಕಾರಿದ ಪಿಎಂ ಮೋದಿ
ವಿಜಯಪುರ ವಿಮಾನ ನಿಲ್ದಾಣ ಮಂಜೂರಾಗಲು ಮುತುವರ್ಜಿ ವಹಿಸಿದ್ದೆ ನಾನು ಈ ವಿಷಯದಲ್ಲಿ ಕ್ರೆಡಿಟ್ ತಗೊಳ್ಳೋದು ಮುಖ್ಯ ಅಲ್ಲ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ? ಎಂದು ಗುಡುಗಿದರು.
ಬಿಜೆಪಿ ಯಲ್ಲಿ ಲಿಂಗಾಯತ ರನ್ನ ತುಳಿಯಲಾಗುತ್ತಿದೆ ಎಂಬ ಎಂ.ಎಲ್.ಸಿ ಪ್ರದೀಪ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ, ಅವರ ಸಹೋದರ ಜಗದೀಶ್ ಶೆಟ್ಟರ್ ಇಷ್ಟು ದಿವಸ ಬಿಜೆಪಿಯಲ್ಲಿದ್ರಲ್ಲಾ ಅವರನ್ನ ತುಳಿಯಲಾಗಿತ್ತೆ? ಲೋಕಾ ಚುನಾವಣೆ ಗೆ ಪಕ್ಷಾಂತರ ಮಾಡುತ್ತಾರೆ ಎಂಬ ಗೊಂದಲ. ನಾನು ಹುಟ್ಟುತ್ತಲೇ ಕಾಂಗ್ರೆಸ್ ವಿರೋಧಿಯಾಗಿದ್ದೇನೆ ಈಗ ವಯಸ್ಸಾಗಿದೆ ಈಗ ಪಕ್ಷಾಂತರ ಮಾಡಿ ಏನು ಮಾಡಲಿ? ಮುಂದೆ ನಮ್ಮ ವಂಶದವರು ಏನಾದರೂ ಹೋದ್ರೆ ಹೋಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಂದು ಬರಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿ ಘೋಷಣೆ : ಕೃಷ್ಣ ಬೈರೇಗೌಡ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.