Wednesday, May 31, 2023
spot_img
- Advertisement -spot_img

ಸಿದ್ದು ಸಂಪುಟದಲ್ಲಿ ಬಹುತೇಕ ಹಿರಿಯರಿಗೆ ಸಚಿವ ಸ್ಥಾನ ಮಿಸ್..!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಾಜಭವನದಲ್ಲಿ 24 ಶಾಸಕರು ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಕೆಲವು ಕಾಂಗ್ರೆಸ್ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿಹೋಗಿದೆ.

ಆರ್.ವಿ.ದೇಶಪಾಂಡೆ, ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ, ಟಿ.ಬಿ.ಜಯಚಂದ್ರ, ಬಿ ಕೆ ಹರಿಪ್ರಸಾದ್, ಅಜಯ್ ಸಿಂಗ್, ಅಶೋಕ್ ಪಟ್ಟಣ್, ಗಣೇಶ್ ಹುಕ್ಕೇರಿ, ರಿಜ್ವಾನ್ ಅರ್ಷದ್, ವಿನಯ್ ಕುಲಕರ್ಣಿ ಮತ್ತು ಎನ್‌ಎ ಹ್ಯಾರಿಸ್ ಕ್ಯಾಬಿನೆಟ್ ಸ್ಥಾನ ಕಳೆದುಕೊಂಡಿದ್ದಾರೆ. ಹಳಿಯಾಳದ 76 ವರ್ಷದ ಆರ್ ವಿ ದೇಶಪಾಂಡೆಯವರಿಗೆ ಸ್ಪೀಕರ್ ಸ್ಥಾನ ವರಿಷ್ಠರು ನೀಡಿದರೂ ಅವರು ಒಪ್ಪಲಿಲ್ಲ. ಅವರು ಕ್ಯಾಬಿನೆಟ್ ಸ್ಥಾನದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು ಆದರೆ ಕಾಂಗ್ರೆಸ್ ಅವರನ್ನು ನಿರಾಕರಿಸಿದೆ.

ಬೆಳಗಾವಿ ಅಥಣಿಯ ನಾಯಕನಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಕಾಂಗ್ರೆಸ್‌ಗೆ ಸೇರಿದ್ದು, ಸಚಿವ ಸ್ಥಾನ ನಿರಾಕರಿಸಿದ್ದಕ್ಕೆ ಅವರ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಲ್ಲವ ಸಮುದಾಯಕ್ಕೆ ಸೇರಿದ 68 ವರ್ಷದ ನಾಯಕ ಹರಿಪ್ರಸಾದ್ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಹಲವು ದಿನಗಳಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದ ಅವರಿಗೆ ಹೈಕಮಾಂಡ್‌ ಮನಸೋತಿರಲಿಲ್ಲ. ಹರಿಪ್ರಸಾದ್ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.

Related Articles

- Advertisement -

Latest Articles