Friday, September 29, 2023
spot_img
- Advertisement -spot_img

ಪದೇ ಪದೇ ಯಾಕೆ ಜಗದೀಶ್ ಶೆಟ್ಟರ್‌ನ್ನು ಟಾರ್ಗೆಟ್ ಮಾಡ್ತಿದ್ದೀರಾ?

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಗೊತ್ತಾಗಿದೆ, ಅದನ್ನು ಇನ್ನು ನಿಮಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಪದೇ ಪದೇ ಯಾಕೆ ಜಗದೀಶ್ ಶೆಟ್ಟರ್ ನ್ನು ಟಾರ್ಗೆಟ್ ಮಾಡ್ತೀದ್ದೀರಾ ? ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡಿ ,ಯಾರೂ ಬೇಡ ಅಂತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು‌ ಪ್ರತಿ ವರ್ಷ ಮನೆಯಲ್ಲಿ ಗಣೇಶ ಕೂರಿಸ್ತಿನಿ, ಕೆಲವರು ಮನೆಯಲ್ಲಿ ಗಣೇಶ ಕೂರಿಸಲ್ಲ, ತೋರಿಕೆಗೆ ಮಾಡ್ತಾರೆ, ನನ್ನ‌ ಬಗ್ಗೆ ಬಿಜೆಪಿಯವರಿಗೆ ಭಯ ಇದೆ, ಭಯ ಇರೋ ಕಾರಣಕ್ಕೆ ಪದೇ ಪದೇ ನನ್ನ ಹೆಸರು ಪ್ರಸ್ತಾಪಿಸ್ತಾ ಇದ್ದಾರೆ, ಇದರಿಂದ ಭಾರತೀಯ ಜನತಾ ಪಾರ್ಟಿಗೆ ನಷ್ಟ ಹೊರತು ಲಾಭ ಅಲ್ಲ ಎಂದು ಹರಿಹಾಯ್ದರು.

ಚೈತ್ರಾ ಕುಂದಾಪುರ ಅಪರಾಧಿ ಸ್ಥಾನದಲ್ಲಿ ‌ನಿಂತಿದ್ದಾರೆ, ಚೈತ್ರಾ ಕುಂದಾಪುರ ಕೇಸ್ ಆದ ಮೇಲೆ ಕೆಲವರಿಗೆ ಧೈರ್ಯ ಬಂದಿದೆ, ಕೆಲವರು ಕಡೆ ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ ಅನ್ನೋ ರೂಮರ್ ಇದೆ, ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು, ಕೆಲವು ಕಡೆ ಸುದ್ದಿ ಹೊರಗೆ ಬರ್ತಿವೆ,ಕೆಲವು ಕಡೆ ಹೊರಗೆ ಬರ್ತಿಲ್ಲ, ಟಿಕೆಟ್ ಕೊಡಿಸೋ ಸಲುವಾಗಿ ಇಂತಹದ್ದೊಂದು ಟೀಮ್ ರೆಡಿಯಾಯ್ತು ಅಂದ್ರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ‘2024ರಲ್ಲಿ ಬಿಜೆಪಿಯ ಅಧಿಕಾರದಿಂದ ಹೊರಗಿಡುವುದೇ ಗಾಂಧೀಜಿಗೆ ನೀಡುವ ನಿಜವಾದ ಗೌರವ’

ಎಲ್ಲೋ ಒಂದು ಕಡೆ ಹಣದ ವ್ಯವಹಾರ ನಡಿದಿದೆ ಅಂದ್ರೆ ಅದು ಬಿಜೆಪಿಗೆ ಬಂದು ನಿಲ್ಲುತ್ತೆ, ಇದಕ್ಕೆ ಬಿಜೆಪಿ ನಾಯಕರು ಅಂತಹ‌ ಪದ್ದತಿ ಇಲ್ಲ ಅಂತಾರೆ. ಆದ್ರೆ ಮಾಹಿತಿ‌ ಪ್ರಕಾರ ಹಿಂದೂ ಕಾರ್ಯಕರ್ತರೇ ಡೀಲ್ ನಲ್ಲಿ ಇನ್ವಾಲ್ವ್ ಆಗಿದ್ದಾರೆ, ಇದು ಬಹಳ ಗಂಭೀರ ವಿಷಯ, ಕನಕಗಿರಿಯಲ್ಲಿ‌ ಟಿಕೆಟ್ ಡೀಲ್ ವಿಷಯಕ್ಕೆ ‌ಕಂಪ್ಲೇಟ್ ಆಗಿದೆ, ಯಾವ ಹಿನ್ನಲೆಯಲ್ಲಿ ಇವೆಲ್ಲ ಹೊರಗೆ ಬರ್ತಿವೆ ಎಂದು ಆಕ್ರೋಶಿಸಿದರು.

ಹಿರಿಯರಿಗೆ ಟಿಕೆಟ್ ಕೊಡದೆ ಇರೋ ಪರಸ್ಥಿತಿ ನೋಡಿದಾಗ ಇಂತಹ ಪ್ರಕರಣ ಹೊರಗೆ ಬರುತ್ತೆ, ಇದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿ ಹಣದ ವ್ಯವಹಾರ ನಡಿದಿದೆ ಅನ್ನೋದು ಸಾಬೀತಾಗಿದೆ ಎಂದರು.

ಮಹದಾಯಿ ಬಗ್ಗೆ ಹೋರಾಟ ಮಾಡಿ, ಮೋದಿ ಬಂದು 9 ವರ್ಷ ಆಯ್ತು. ಹನಿ ನೀರು‌ ಕೊಡೋಕೆ 9 ವರ್ಷ ಬೇಕಾ? ಜಗದೀಶ್ ಶೆಟ್ಟರ್ ರನ್ನ ಚುನಾವಣೆಯಲ್ಲಿ ಟಾರ್ಗೆಟ್ ‌ಮಾಡಿದ್ರಿ. ಪದೇ ಪದೇ ಶೆಟ್ಟರ್ ಹೆಸರು ಹೇಳಿದ್ರೆ ನೀವು ಉದ್ದಾರ ಆಗಲ್ಲ, ಲೋಕಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಭಯ ಬಿಜೆಪಿಗೆ ಸ್ಟಾರ್ಟ್ ಆಗಿದೆ, ಮೋದಿ ಅವರಿದ್ದಾಗಲೇ ಕಳಸಾ ಬಂಡೂರಿ‌ ಎಂಡ್ ಮಾಡಿ, ಪ್ರತಿ ವರ್ಷ ಕಳಸಾ ಬಂಡೂರಿ ಹೆಸರಲ್ಲಿ ವೋಟ್ ತಗೋಳ್ತಿರಲ್ಲ, ಮಹದಾಯಿ ನೀರು ಕೊಡಿ ಜನ್ಮ ಸಾರ್ಥಕ ಆಗತ್ತೆ ಎಂದು ಆಕ್ರೋಶಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles