ಬೆಂಗಳೂರು: INDIA ಎಂಬ ಹೆಸರಿಗೆ ಬಿಜೆಪಿ ಏಕೆ ಹೆದರುತ್ತಿದೆ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಭಾರತ್ ಎಂಬುದಾಗಿ ಬದಲಾಯಿಸಲಿದೆ ಎಂಬ ವರದಿ ಬೆನ್ನಲ್ಲೇ ಟ್ವೀಟ್ (ಎಕ್ಸ್) ಮಾಡಿರುವ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
INDIA ಬಗ್ಗೆ ಹೆಮ್ಮೆ ಪಡುವುದು ಯಾವಾಗಿನಿಂದ ದೇಶವಿರೋಧಿ ಕೃತ್ಯವಾಯಿತು? ಜುಲೈ 18, 2023ರಂದು ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ನಮ್ಮ ಹೊಸ ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟಾಗಿಂದಲೇ? INDIA ಎಂಬ ಹೆಸರಿಗೆ ಬಿಜೆಪಿ ಏಕೆ ಹೆದರುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಹಿಂದೂಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದ್ದರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ’
’75 ವರ್ಷಗಳ ದೇಶದ ಬೃಹತ್ ಪರಂಪರೆಯನ್ನು ಇಡೀ ವಿಶ್ವ ಒಪ್ಪಿಕೊಂಡಿದ್ದು, ಬಿಜೆಪಿಯ ಈ ಸಣ್ಣ ಬುದ್ದಿಯಿಂದ INDIAದ ಭವ್ಯ ಬ್ರಾಂಡ್‌ಗೆ ಧಕ್ಕೆಯಾಗಿದೆ. ದೇಶದಲ್ಲಿ ಹಣದುಬ್ಬರ ಗಗನಕ್ಕೇರುತ್ತಿರುವಾಗ ದೇಶದ ಹೆಸರು ಬದಲಿಸುವುದು ಅಗತ್ಯವೇ’? ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.