ವಿಜಯಪುರ: ರಾಜ್ಯ ಸರಕಾರದ ಶೇ. 40 ಭ್ರಷ್ಚಾಚಾರದ ಕುರಿತು ದೂರು ನೀಡಿದರೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನವಹಿಸಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಚುನಾವಣೆಗೆ ಬಂದಾಗ ನಾವು ಅವರಿಗೆ ಪ್ರಶ್ನೆ ಮಾಡುತ್ತೇವೆ. ಭ್ರಷ್ಟಾಚಾರ ಆರೋಪ ಇರುವವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಬೇರೆ ಕಡೆ ಧಾಳಿ ನಡೆಸುವ ನೀವು ಈಗ ಆರೋಪ ಇರುವವರ ಮೇಲೆ ಯಾಕೆ ಧಾಳಿ ನಡೆಸಿಲ್ಲ? ಈ ಸಚಿವರು, ಅಧಿಕಾರಿಗಳ ವಿರುಧ್ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. 40% ಕಮಿಷನ್ ಆರೋಪ ಸರಕಾರದ ಮೇಲಿದೆ.
ಗುತ್ತಿಗೆದಾರರ ಸಂಘ ಈ ಆರೋಪ ಮಾಡಿದೆ. ಪಶ್ಚಿಮ ಬಂಗಾಳ, ಅಲ್ಲಿ, ಇಲ್ಲಿ ದಾಳಿ ಮಾಡ್ತಿದ್ದಾರೆ. ಇವರ ಮೇಲೆ 40% ಕಮಿಷನ್ ಆರೋಪ ಇದ್ದರೂ ಇಲ್ಲಿನ ರಾಜಕಾರಣಿಗಳ ಮೇಲೆ ಯಾಕೆ ದಾಳಿಗಳಾಗ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಸರಕಾರದ ಶೇ. 40 ಭ್ರಷ್ಚಾಚಾರದ ಕುರಿತು ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಪ್ರಕರಣದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.ಕಾನೂನು ಹೋರಾಟದನ್ವಯ ಕೆಂಪಣ್ಣ ಅವರ ಬಂಧನವಾಗಿ ಈಗ ಜಾಮೀನು ಸಿಕ್ಕಿರುವುದು ಬೇರೆ ವಿಚಾರ ಎಂದು ಹೇಳಿದರು.