ಬೆಂಗಳೂರು : ಸೆಪ್ಟೆಂಬರ್ 22 ರ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನೇಮಕವಾಗುವ ಸಾಧ್ಯತೆಗಳು ಹೆಚ್ಚಾಗಿ ಕೇಳಿ ಬರುತಿದ್ದು, ಈದೀಗ ಈ ಪಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ : Bengaluru Bandh : ಖಾಸಗಿ ಸಾರಿಗೆ ಸಂಸ್ಥೆಗಳಿಂದ ನಾಳೆ ‘ಬೆಂಗಳೂರು ಬಂದ್’ಗೆ ಕರೆ : ಏನಿರುತ್ತೆ-ಏನಿರಲ್ಲ?
ಮೂಲಗಳ ಪ್ರಕಾರ ಕೇಂದ್ರದ ಸ್ಪೆಷಲ್ ಪಾರ್ಲಿಮೆಂಟ್ ಬಳಿಕ ರಾಜ್ಯಾಧ್ಯಕ್ಷ ಆಯ್ಕೆ ನಡೆಯುವ ಸಾಧ್ಯತೆ ಇದ್ದು, ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಮೂರು ಪ್ರಬಲ ಸಮುದಾಯದಿಂದ ಮೂರು ಜನರನ್ನ ಆಯ್ಕೆ ಮಾಡಿರುವ ಹೈಕಮಾಂಡ್, ಈ ರೇಸ್‌ನಲ್ಲಿ ವಿಜಯೇಂದ್ರ ಮುಂಚೂಣಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ರಾಜ್ಯ ರಾಜಧಾನಿಯಲ್ಲಿ ಇಂದು ಜೆಡಿಎಸ್ ಸಮಾವೇಶ
ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಆಯ್ಕೆಗೆ ಬಿಜೆಪಿ ಲೆಕ್ಕಾಚಾರವೇನು?
ವಿಜಯೇಂದ್ರ ಬೈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿರುವ ಟ್ರಾಕ್ ರೆಕಾರ್ಡ್ ಹೊಂದಿದ್ದಾರೆ. ಬಿಎಸ್‌ವೈ ಪಕ್ಷದಿಂದ ಹಿಂದೆ ಸರಿದ ಬಳಿಕ, ಪಕ್ಷದ ಜೊತೆ ಲಿಂಗಾಯತ ಸಮುದಾಯದ ಬೆಂಬಲ ಕಡಿಮೆಯಾಗಿತ್ತು. ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯ ಪಕ್ಷದ ಜೊತೆ ಉತ್ತಮ ಸಂಬಂಧ ಉಳಿಸಿಕೊಳ್ಳುವ ಮೂಲಕ ಲಿಂಗಾಯತ ಸಮುದಾಯವನ್ನು ಒಲೈಸುವ ಕಾರಣಕ್ಕಾಗಿ ವಿಜಯೇಂದ್ರ ಅವರನ್ನು ಹೈಕಮಾಂಡ್ ಆಯ್ಕೆ ಮಾಡುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರ ನ್ನು ಅಗ್ರೆಸ್ಸಿವ್ ಮೋಡ್‌ನಲ್ಲಿ ಸಂಘಟಿಸುವ ಲೆಕ್ಕಾಚಾರ ಬಿಜೆಪಿಯದಾಗಿದ್ದು , ರಾಜ್ಯಾಧ್ಯಕ್ಷರ ಆಯ್ಕೆಗೆ ಬಿ ಎಸ್ ವೈ ಪುತ್ರ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದೆ.
ಇದನ್ನೂ ಓದಿ : Karnataka BJP : ವಿಪಕ್ಷ ನಾಯಕನ ನೇಮಿಸದ ಬಿಜೆಪಿ: ನಡ್ಡಾ, ಕಟೀಲ್, ಮುಖ್ಯ ಕಾರ್ಯದರ್ಶಿಗೆ ಲೀಗಲ್ ನೋಟಿಸ್
ವಿಜಯೇಂದ್ರ ರಾಜ್ಯಾಧ್ಯಕ್ಷರ ಆಯ್ಕೆಗೆ ಜೆಡಿಎಸ್ ವರಿಷ್ಠ ಬೆಂಬಲ!
ರಾಜ್ಯದಲ್ಲಿ ಜೆಡಿಎಸ್ ಹಾಗು ಬಿಜೆಪಿ ಮೈತ್ರಿ ವಿಚಾರ ಕೇಳಿಬರುತ್ತಿದ್ದು, ಇದೆ ಸಂದರ್ಭದಲ್ಲಿ ಜೆಡಿಎಸ್ ನಾಯಕರೊಬ್ಬರು, ‘ವಿಜಯೇಂದ್ರ ರಾಜ್ಯಾಧಕ್ಷ ಪಟ್ಟಕ್ಕೆ ಸರಿಯಾದ ವ್ಯಕ್ತಿ’ ಎಂದು ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ”ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರಾಗಿ ಮಾಡಿದ್ರೆ ಲಿಂಗಾಯತ ಸಮುದಾಯ ಸಂಘಟನೆ ಸಾಧ್ಯವಿದೆ. ಜೆಡಿಎಸ್ ಒಕ್ಕಲಿಗ ಮತಗಳು ಬಿಜೆಪಿ ಸೇರಿಕೊಳ್ಳಲಿದೆ. ಲಿಂಗಾಯತ,ಒಕ್ಕಲಿಗ ಮತಗಳ ಬಲದಿಂದ ಚುನಾವಣಾ ಗೆಲುವು ಸಾಧ್ಯವಿದ್ದು, ವಿಜಯೇಂದ್ರ ರಾಜ್ಯಾಧ್ಯಕ್ಷ ರಾದ್ರೆ ಮೈತ್ರಿಗೆ ಮತ್ತಷ್ಟು ಲಾಭ ತಂದುಕೊಡಲಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.