ಬೆಂಗಳೂರು: ‘ನನ್ನ ಮೇಲೆ ಗೂಂಡಾ ಕಾಯ್ದೆ (Gunda act) ದಾಖಲಿಸಿರುವ ಹಿಂದೆ ಸಚಿವ ಜಮೀರ್ ಅಹಮದ್ ಕೈವಾಡ ಇದೆ. ಸರ್ಕಾರ ಬಹಿರಂಗವಾಗಿ ಕ್ಷಮೆ ಕೇಳಬೇಕು, ನನಗೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹಾಕ್ತಿನಿ ಎಂದು ಹಿಂದುತ್ವ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹೇಳಿದರು.
ಪ್ರೆಸ್ ಕ್ಲಬ್‌ನಲ್ಲಿ ಹಿಂದೂ ಸಂಘಟನೆಗಳ ಒಕ್ಕೂಟದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಚಿಕ್ಕವಯಸ್ಸಿನಿಂದಲೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದೀನಿ ಎಂದು ಹೇಳ್ಕೊಂಡು ಬಂದಿದ್ದೀರಾ, ನನ್ನ ಮೇಲಿನ ಆರೋಪಕ್ಕೆ ದಾಖಲೆಗಳನ್ನು ಕೊಡಿ ಎಂದು ಕೇಳ್ತಿದ್ದೇನೆ. ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ, ಸುಳ್ಳು ಕಾರಣ ಕೊಟ್ಟು ಈ ರೀತಿ ಮಾಡಿದ್ದಾರೆ. ನಾನು ಮಾರಾಕಾಸ್ತ್ರ ಹಿಡಿದು ಓಡಾಡ್ತೀನಿ ಅಂದಿದ್ದಾರೆ. ಅದಕ್ಕೆಲ್ಲಾ ಸರ್ಕಾರ ದಾಖಲೆ ಕೊಡಬೇಕು’ ಎಂದರು.
ಇದನ್ನೂ ಓದಿ; ‘ಬಣ ರಾಜಕೀಯಕ್ಕೆ ನಾನು ಬೆಂಬಲ ಕೊಟ್ಟಿಲ್ಲ; ನನ್ನದು ಕಾಂಗ್ರೆಸ್ ಬಣ’
‘ಕನಕಪುರ ನ್ಯಾಯಾಲಯಕ್ಕೆ ಹೋಗುವಾಗ ಏಕಾಏಕಿ ಕಾರು ಅಡ್ಡಗಟ್ಟಿ ಸಿಸಿಬಿ (CCB) ಎಂದು ಹೇಳಿ, ಗೂಂಡಾ ಕಾಯ್ದೆಯಡಿ ನನ್ನನ್ನು ಬಂಧಿಸ್ತಾರೆ. ರಾತ್ರಿ 9 ಗಂಟೆವರೆಗೆ ಊಟ, ನೀರು ಕೊಡದೆ ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದರು. ನಾನು ಏನೇ ಪ್ರಶ್ನೆ ಮಾಡಿದರೂ ನಮಗೆ ಗೊತ್ತಿಲ್ಲ ಎಂದಿದ್ದರು. ಕೊನೆಗೆ ವಕೀಲರಿಗೆ ಪೋನ್ ಮಾಡಲು ಅವಕಾಶ ಕೊಟ್ಟರು. ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದಕ್ಕೆ ಬಂಧಿಸಿರುವುದಾಗಿ ಹೇಳ್ತಾರೆ. ನನ್ನ ಮೇಲೆ ಕಾನೂನು ಬಾಹಿರವಾಗಿ ಗೂಂಡಾ ಕೇಸ್ ಹಾಕಲಾಗಿದೆ. ಇಷ್ಟು ದಿನ ಗೂಂಡಾ ಕಾಯ್ದೆಯಡಿ ಬಂಧಿಸಿ, ಈಗ ಬಿಡುಗಡೆ ಮಾಡಿದ್ರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ.
‘ನನ್ನ ಬಂಧನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರೆ ನೇರ ಕಾರಣ, ಸಿಸಿಬಿ ಪೊಲೀಸರ ಮೇಲೆ ಒತ್ತಡ ಹಾಕಿ ನನ್ನನ್ನು ಬಂಧಿಸಿದ್ದರು. ನಾವು ಧಾರ್ಮಿಕವಾಗಿ ಹೋರಾಟ ಮಾಡ್ತಿದ್ದೇವೆ. ಸಿದ್ದರಾಮಯ್ಯ, ಜಮೀರ್ ಕುರಿತು ಮಾತನಾಡಿಲ್ಲ. ರಾಜ್ಯದ ಹಿಂದೂ ಸಂಘಟನೆ, ಕಾರ್ಯಕರ್ತರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ. ಲೋಕಸಭೆಯಲ್ಲಿ ಹಿಂದೂ ಮತಗಳು ಕೈ ತಪ್ಪಬಹುದು ಅನ್ನೋ ಆತಂಕದಿಂದ ನಮ್ಮ ಮೇಲೆ ಈ ರೀತಿ ಮಾಡ್ತಿದ್ದಾರೆ. ಇದ್ರಿಶ್ ಪಾಷ ಕೊಲೆಯಾಗಿರಲಿಲ್ಲ, ಕೊಲೆಯಾಗಿದೆ ಎಂದು ಬಿಂಬಿಸಿದರು. ಇದ್ರಿಷ್ ಪಾಷ ಸಾವಿಗೆ ₹25 ಲಕ್ಷ ಪರಿಹಾರ ಎಂದು ಕೊಟ್ರು.. ಯಾಕೆ ಕೊಟ್ರು’ ಎಂದರು.
ಇದನ್ನೂ ಓದಿ; ನೆಹರೂ ಅವರ ಮಧ್ಯರಾತ್ರಿಯ ಭಾಷಣ ನಮಗೆ ಸ್ಪೂರ್ತಿ : ಪ್ರಧಾನಿ ಮೋದಿ
ಜೀವ ಬೆದರಿಕೆ ಇದೆ:
‘ಲೋಕಲ್ ನಂಬರ್‌ನಿಂದ ಕರೆ ಮಾಡಿ ಹೊಡೆದು ಸಾಯಿಸ್ತೀವಿ ಎಂದು ಬೆದರಿಕೆ ಹಾಕ್ತಾರೆ. ನಾನು ಧರ್ಮದ ಪರ ಹೋರಾಟ ಮಾಡ್ತಿದ್ದೇನೆ, ನನ್ನ ಹಿಂದೆ ಧರ್ಮದ ರಕ್ಷಣೆ ಇದೆ. ನಾನು ಹೋರಾಟಕ್ಕೆ ಸದಾ ಸಿದ್ಧ. ರಕ್ಷಣೆ ಕೊಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡಲ್ಲ’ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.