Monday, December 4, 2023
spot_img
- Advertisement -spot_img

ಬಡವರ ಸರ್ಕಾರ ಬರಲಿದೆ, ಅದಾನಿಯದ್ದಲ್ಲ : ರಾಹುಲ್ ಗಾಂಧಿ

ರಾಯಪುರ : ಛತ್ತೀಸ್‌ಗಢ, ರಾಜಸ್ಥಾನ, ಕರ್ನಾಟಕ, ಹಿಮಾಚಲ ಪ್ರದೇಶ ಅಥವಾ ತೆಲಂಗಾಣ, ಮಧ್ಯಪ್ರದೇಶ ಎಲ್ಲಿಯೂ ಆಗಿರಲಿ ಮುಂಬರುವ ಸರ್ಕಾರಗಳು ಬಡವರ ಸರ್ಕಾರಗಳಾಗಿರುತ್ತವೆಯೇ ಹೊರತು, ಅಂಬಾನಿ ಅದಾನಿಯದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಛತ್ತೀಸ್‌ಗಢದ ರಾಯಪುರದಲ್ಲಿ ನಡೆದ ‘ರಾಜೀವ್ ಯುವ ಮಿತನ್’ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಎರಡು ಅಥವಾ ಮೂರು ಬಿಲಿಯನೇರ್ ಗಳಿಗಾಗಿ ಮಾತ್ರ ಕೆಲಸ ಮಾಡ್ತಿದೆ. ಅದಾನಿ ಕುಟುಂಬವು ತನ್ನದೇ ಕಂಪನಿಯಲ್ಲಿ ರಹಸ್ಯ ಹೂಡಿಕೆ ಮಾಡುವ ಮೂಲಕ ಅದಾನಿ ಸಮೂಹದ ಷೇರುಗಳಲ್ಲಿ ಭಾರೀ ಏರಿಕೆ ಕಾಣುವಂತೆ ಮಾಡಿದೆ ಎಂದು ತನಿಖಾ ಪತ್ರಕರ್ತರ ಸಂಘಟನೆಯಾದ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚರ ವರದಿ ಯೋಜನೆ (ಒಸಿಸಿಆರ್ ಪಿ) ಆರೋಪ ಮಾಡಿತ್ತು. ಇವೆಲ್ಲವೂ 2013- 2018ರ ಅವಧಿಯಲ್ಲಿ ನಡೆದಿದೆ ವರದಿ ಹೇಳಿದೆ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅದಾನಿ ವಿರುದ್ಧ ತನಿಖೆ ಮಾಡಲು ಮೋದಿ ಯಾಕೆ ಮುಂದಾಗ್ತಿಲ್ಲ ಎಂದು ಎಂದು ಛತ್ತೀಸ್‌ಗಢ ಮತ್ತು ದೇಶದ ಜನರಿಗೆ ಪ್ರಧಾನಮಂತ್ರಿ ಹೇಳಬೇಕು. ಮೋದಿ ಯಾಕೆ ತನಿಖೆ ಮಾಡಲು ಉತ್ಸಾಹ ತೋರುತ್ತಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಯಾಕೆಂದರೆ ತನಿಖೆ ನಡೆದರೆ ಅದಾನಿಗಲ್ಲ ಮಾತ್ರವಲ್ಲ ಇನ್ನೊಬ್ಬರಿಗೆ ಅದರಿಂದ ಸಮಸ್ಯೆ ಆಗಲಿದೆ ಎಂದು ರಾಹುಲ್ ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles