Wednesday, March 22, 2023
spot_img
- Advertisement -spot_img

ಯುವಜನತೆ ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಹಾಕಿ, ನೀವೂ ಹಾಕಿ : ಡಿಕೆಶಿವಕುಮಾರ್

ಬೆಂಗಳೂರು : ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಗೆ ಹೋಗಿದ್ದಂತೂ ನಿಜ, ನನ್ನ ಖಾಸಗಿ ವ್ಯವಹಾರಕ್ಕೆ ಹೋಗಿದ್ದೆ ಅಷ್ಟೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ, ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಕಾಂಗ್ರೆಸ್ ಸದಸ್ಯತ್ವಕ್ಕೆ ಅರ್ಜಿ ಹಾಕಿ, ನೀವೂ ಹಾಕಿ ಎಂದು ಹೇಳಿದರು.ಜಾರಕಿಹೊಳಿಯವರ ಹೇಳಿಕೆಯನ್ನು ಖಂಡಿಸುತ್ತೇವೆ, ಇದನ್ನು ಅವರಿಗೂ ಹೇಳಿದ್ದೇವೆ, ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಮಾತನಾಡಿರುವುದು ತಪ್ಪು ಎಂದರು.

ಯಾವುದೋ ಪುಸ್ತಕದಲ್ಲಿದೆ, ವಿಕಿಪೀಡಿಯಾದಲ್ಲಿದೆ ಎಂದು ಹಿಂದೂ ಪದ ಅಶ್ಲೀಲ ಎಂದು ಹೇಳುವುದು ತಪ್ಪು, ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಯಾವುದೋ ಪುಸ್ತಕದಲ್ಲಿದೆ, ವಿಕಿಪೀಡಿಯಾದಲ್ಲಿದೆ ಎಂದು ಹಿಂದೂ ಪದ ಅಶ್ಲೀಲ ಎಂದು ಹೇಳುವುದು ತಪ್ಪು, ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.


ಡಿ ಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿದ್ದರೆ ಮುಖ್ಯಮಂತ್ರಿ ಆಗುವುದಿಲ್ಲ, ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದ ಬಗ್ಗೆ ಕೇಳಿದಾಗ ಹಾಗಾದರೆ ಬಿಜೆಪಿಯಲ್ಲಿ ಸಿಎಂ ಕ್ಯಾಂಡಿಡೇಟ್ ಇಲ್ಲವೆಂದಾಯಿತಲ್ಲವೇ ಎಂದು ವ್ಯಂಗ್ಯವಾಡಿದರು.

Related Articles

- Advertisement -

Latest Articles