Wednesday, May 31, 2023
spot_img
- Advertisement -spot_img

ಲಂಚ ಪಡೆದಿಲ್ಲ, ಸಾಬೀತಾದ್ರೆ ಸನ್ಯಾಸತ್ವ ಸ್ವೀಕಾರ : ಮಾಜಿ ಸಿಎಂ ಸಿದ್ದರಾಮಯ್ಯ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಮಾತನಾಡಿ, ನಾನಾಗಲೀ ಅಥವಾ ಎಂ.ಬಿ.ಪಾಟೀಲ್ ಆಗಲೀ ಎಲ್​ಒಸಿ ಬಿಡುಗಡೆ ಮಾಡಲು ಲಂಚ ತೆಗೆದುಕೊಂಡಿದ್ದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆದು, ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.‌

ರಾಜ್ಯ ಬಿಜೆಪಿಯ 40 ಪರ್ಸೆಂಟ್ ಸರ್ಕಾರ ಲೂಟಿ ಹೊಡೆಯುತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. 2013ರಲ್ಲಿ ಅಧಿಕಾರಕ್ಕೆ ಬರುವ ಮುನ್ನ 2015ರಲ್ಲಿ ರೂ. ನೀರಾವರಿ ಯೋಜನೆಗಳಿಗೆ ಐದು ವರ್ಷಗಳಲ್ಲಿ 50,000 ಕೋಟಿ ರೂ ನೀಡಿದ್ದೇವು. ಆದರೆ ವಾಸ್ತವದಲ್ಲಿ ನಾವು ಐದು ವರ್ಷಗಳಲ್ಲಿ ಸುಮಾರು 56,000 ಕೋಟಿ ರೂ. ಖರ್ಚು ಮಾಡಿದ್ದೇವು.

ಇನ್ನೊಂದೆಡೆ ನೀರಾವರಿಗೆ ಸುಮಾರು 1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿದ ಬಿಜೆಪಿ 50 ಸಾವಿರ ಕೋಟಿ ರೂ. ಮಾತ್ರ ವ್ಯಯಿಸಿದೆ, ಇದೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಕೆಜಿಯಿಂದ 10 ಕೆಜಿ ಅಕ್ಕಿಯನ್ನು ಪಿಡಿಎಸ್ ಅಡಿಯಲ್ಲಿ ವಿತರಿಸುವುದಾಗಿ ಘೋಷಿಸಿದರು.

Related Articles

- Advertisement -

Latest Articles