Wednesday, May 31, 2023
spot_img
- Advertisement -spot_img

ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಕೊಡಲಾಗುವುದು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಹಾಸನ : ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಹಾಸನ ಕಾರ್ಯಕರ್ತರ ಸಭೆ ಇದ್ದು, ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್ ಕೊಡುವ ನಿರ್ಧರಿಸ್ತೇವೆ ಎಂದು ತಿಳಿಸಿದರು.

ಎಲ್ಲ ಕಾರ್ಯಕರ್ತರು ನನ್ನ ಕುಟುಂಬದವರೇ, ನಾಳೆ ಹಾಸನ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದಲ್ಲಿ ದೇವೇಗೌಡರ ಆಸೆ ಕಮರಿ ಹೋಗದಂತೆ ನಡೆದುಕೊಳ್ಳುತ್ತೇನೆ, ಈ ಪಕ್ಷದ ಬಗ್ಗೆ ಜನತೆಯಲ್ಲಿ ಅಭಿಮಾನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇನೆ , ಅಂದು ಹೇಳಿದ್ದ ಹೇಳಿಕೆಗೆ ಇಂದಿಗೂ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಟಿಕೆಟ್ ಯಾರಿಗೆ ಕೊಡಬೇಕು ಅನ್ನೋದ್ರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಹಾಸನ ಟಿಕೆಟ್ ವಿಚಾರವಾಗಿ ಚರ್ಚೆಗಳು ನಡೆಯುತ್ತಲೇ ಇವೆ, ವರಿಷ್ಟರ ಜೊತೆಗೆ ಮಾತನಾಡಿ , ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಕೊಡಲಾಗುವುದು ಎಂದು ಹೆಚ್ ಡಿಕೆ ಹೇಳಿದ್ದರೂ ಸಹ ಸೈಲೆಂಟ್ ಆಗಿ ರೇವಣ್ಣ, ಭವಾನಿ ಪ್ರಚಾರ ಕೆಲಸದಲ್ಲಿ ತೊಡಗಿದ್ದಾರೆ. ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಮಾತ್ರ ನಾನೇ ಇಲ್ಲಿನ ಅಭ್ಯರ್ಥಿ ಎಂದು ಪ್ರಚಾರ ಕಾರ್ಯ ಆರಂಭಿಸಿದ್ದು, ಹೆಚ್ ಡಿ ಕುಮಾರಸ್ವಾಮಿಯವರು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ, ಹೆಚ್ ಡಿ ರೇವಣ್ಣ ಹೆಚ್ ಡಿ ಕುಮಾರಸ್ವಾಮಿಯವರ ಜೊತೆಗೆ ಮಾತನಾಡಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದರು.

ಅಂದಹಾಗೆ ಭವಾನಿ, ಒಂದು ಕಡೆ ಪ್ರಚಾರ ನಡೆಸ್ತಿದ್ರೆ ಇತ್ತ ಕಡೆ ಜೆಡಿಎಸ್‌ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ದಿ. ಎಚ್ ಎಸ್‌ ಪ್ರಕಾಶ್ ಪುತ್ರ ಜಿಪಂ ಮಾಜಿ ಸದಸ್ಯ ಎಚ್ ಪಿ ಸ್ವರೂಪ್ ಪ್ರಚಾರ ಮುಂದುವರೆಸಿದ್ದಾರೆ. ಟಿಕೆಟ್ ಆಕಾಂಕ್ಷಿ ಸ್ವರೂಪ್ ಚಿತ್ತ ನಾಳೆಯ ಸಭೆಯ ಮೇಲಿದ್ದು, ಟಿಕೆಟ್ ಯಾರ ಪಾಲಾಗುತ್ತೆ ಅನ್ನೋದು ಸದ್ಯದ ಕುತೂಹಲ..

Related Articles

- Advertisement -

Latest Articles