Monday, December 4, 2023
spot_img
- Advertisement -spot_img

‘ಸೂರ್ಯಯಾನ’ಮಿಷನ್ ಯಶಸ್ವಿ ಉಡಾವಣೆ : ರಾಜಕೀಯ ಗಣ್ಯರಿಂದ ಇಸ್ರೋಗೆ ಅಭಿನಂದನೆ

ಬೆಂಗಳೂರು : ಭಾರತದ ಚೊಚ್ಚಲ ಸೂರ್ಯಯಾನ ಮಿಷನ್ ಆದಿತ್ಯ ಎಲ್-1 ಯಶಸ್ವಿ ಉಡಾವಣೆಯಾಗಿರುವ ಹಿನ್ನೆಲೆ ವಿವಿಧ ರಾಜಕೀಯ ಗಣ್ಯರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಚಂದ್ರಯಾನ-3ರ ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಇಸ್ರೋದಲ್ಲಿರುವ ನಮ್ಮ ವಿಜ್ಞಾನಿಗಳುಮತ್ತು ಇಂಜಿನಿಯರ್ ಗಳಿಗೆ ಅಭಿನಂದನೆಗಳು. ‘ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುವ ಸಲುವಾಗಿ ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ’ ಎಂದು ಹೇಳಿದ್ದಾರೆ.

ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್-1 ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ತುಂಬು ಹೃದಯದ ಅಭಿನಂದನೆಗಳು. ಇದರೊಂದಿಗೆ ಸೂರ್ಯನ ಅಧ್ಯಯನ ನಡೆಸುವ ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದ್ದು, ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸೂರ್ಯಯಾನದಿಂದ ಬಹಳ ವಿಷಯಗಳು ಹೊರ ಬರಲಿವೆ. ಇದು ಮಹತ್ತರವಾದ ಸಾಧನೆ. ಇದಕ್ಕಾಗಿ ದುಡಿದಂತಹ ಎಲ್ಲಾ ತಂಡಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದು, ಶ್ರೀಹರಿಕೋಟಾದಿಂದ ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್-1 ಯಶಸ್ವಿಯಾಗಿ ಉಡಾವಣೆಯಾಗಿದೆ. ಶ್ರೇಷ್ಠತೆಯ ಅನ್ವೇಷಣೆಯನ್ನು ಉಳಿಸಿಕೊಳ್ಳುವಲ್ಲಿ ಇಸ್ರೋ ಕೆಲ ದಿನಗಳ ಹಿಂದೆ ಚಂದ್ರನಲ್ಲಿಗೆ, ಇಂದು ಸೂರ್ಯನಲ್ಲಿಗೆ ತಲುಪಿದೆ. ಇಸ್ರೋಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಚಂದ್ರಯಾನ-3 ಯಶಸ್ಸಿನ ನಂತರ ಇಸ್ರೊ ವಿಜ್ಞಾನಿಗಳು ಸೂರ್ಯನತ್ತ ಗಮನ ಹರಿಸಿ ಆದಿತ್ಯ ಎಲ್ 1 ರಾಕೆಟನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ಐತಿಹಾಸಿಕ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿಶ್ವನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ನಾಯಕನಾಗುವತ್ತ ಸಾಗುತ್ತಿದ್ದು, ಅದಕ್ಕೆ ಪೂರಕವಾಗಿ ಬಾಹ್ಯಾಕಾಶದಲ್ಲಿಯೂ ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಮೂಲಕ ವಿಶ್ವವನ್ನು ಭಾರತದೆಡೆಗೆ ನೋಡುವಂತೆ ಮಾಡಿದೆ‌. ಇಂತಹ ಮಹೋನ್ನತ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles