Thursday, September 28, 2023
spot_img
- Advertisement -spot_img

ಪ್ರಧಾನಿ ಮೋದಿಗೆ ʼರಾಖಿʼ ಕಟ್ಟಿ ಬರಮಾಡಿಕೊಂಡ ದ.ಆಫ್ರಿಕಾದ ಅನಿವಾಸಿ ಭಾರತೀಯರು

ಜೋಹಾನ್ಸ್‌ಬರ್ಗ್‌ (ದ.ಆ) : ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತೀಯ ಮೂಲದ ಅನಿವಾಸಿ ಮಹಿಳೆಯರು ರಾಖಿ ಕಟ್ಟುವ ಮೂಲಕ ಸ್ವಾಗತ ಕೋರಿದರು.

ಆರ್ಯ ಸಮಾಜದ ದಕ್ಷಿಣ ಆಫ್ರಿಕಾದ ಅಧ್ಯಕ್ಷೆ ಆರತಿ ನಾನಕಚಂದ್ ಶಾನಂದ್ ಮತ್ತು ಭಾರತೀಯ ಸಮುದಾಯದ ಸದಸ್ಯರಾದ ಡಾ ಸರ್ರೆಸ್ ಪದಯಾಚೀ ಅವರು ಮೋದಿ ಕೈಗೆ ರಾಖಿ ಕಟ್ಟಿ ಸಹೋದರತೆಯನ್ನು ಮೆರೆದರು.

ಭಾರತವು ಪ್ರಪಂಚದ ಬೆಳವಣಿಗೆಯ ಇಂಜಿನ್: ಬಳಿಕ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿ ಮಾತನಾಡಿದರು. ಜಾಗತಿಕ ಆರ್ಥಿಕ ಪಲ್ಲಟಗಳ ಹೊರತಾಗಿಯೂ, ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತ ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಲಿದೆ ಎಂದು ಮೋದಿ ತನ್ನ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ : ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪಾಕ್‌ನಿಂದ ಬರ್ತಾರೆ ಸಹೋದರಿ!

ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ ಸರ್ಕಾರವು ಕೈಗೊಂಡ ಸುಧಾರಣೆಗಳನ್ನು ನೆನಪಿಸಿಕೊಂಡ ಮೋದಿ, ಮುಂಬರುವ ವರ್ಷಗಳಲ್ಲಿ ಭಾರತವು ಪ್ರಪಂಚದ ಬೆಳವಣಿಗೆಯ ಇಂಜಿನ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಂಕ್ರಾಮಿಕ ರೋಗವನ್ನು ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಅವಕಾಶವಾಗಿ ಪರಿವರ್ತಿಸಿದ ಕಾರಣ. ಮಿಷನ್ ಮೋಡ್‌ನ ಸುಧಾರಣೆಗಳ ಮೂಲಕ ಭಾರತದಲ್ಲಿ ಆರ್ಥಿಕವಾಗಿ ಬೆಳವಣಿಗೆಯಾಗಿದೆ ಎಂದು ಮೋದಿ ಶ್ಲಾಘಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles