ಚಿಕ್ಕಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಶಾಸಕ ಪ್ರದೀಪ್ ಈಶ್ವರ್ ಫೋಟೋ ಇಟ್ಟು ಮಹಿಳೆಯರು ಪೂಜೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಫೋಟೋವನ್ನು ಲಕ್ಷ್ಮೀ ಮುಂದೆ ಇಟ್ಟು ಫೋಟೋಗೆ ತಿಲಕವನ್ನಿಟ್ಟು, ಸಿಹಿ ತಿನ್ನಿಸಿ ಆಚರಿಸಿದರು. ಪ್ರದೀಪ್ ಈಶ್ವರ್ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ 60 ಸಾವಿರ ಮಹಿಳೆಯರಿಗೆ ಉಚಿತ ಸೀರೆ ವಿತರಿಸಿದ್ದರು.
ಇದನ್ನೂ ಓದಿ: ʼಕಾವೇರಿʼ ಸಮಸ್ಯೆಗೆ ʼಮೇಕೆದಾಟು ಯೋಜನೆʼಯೊಂದೇ ಪರಿಹಾರ: ಡಿಕೆಶಿ
ಅಷ್ಟೇ ಅಲ್ಲದೇ ವರಮಹಾಲಕ್ಷ್ಮಿ ಪ್ರಯುಕ್ತ ಮನೆ ಮನೆಗೆ ತೆರಳಿ ಶಾಸಕ ಪ್ರದೀಪ್ ಈಶ್ವರ್ ಬಾಗಿನ ನೀಡಿ, ಹಬ್ಬದ ಶುಭಾಷಯ ಕೋರಿದ್ದಾರೆ. ಇಂದು ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮವಾಗಿದ್ದು, ಲಕ್ಷ್ಮೀಗೆ ಹೂವು-ಹಣ್ಣನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.