ಧಾರವಾಡ: ಚುನಾವಣೆಗೆ ಬೆಲೆ ಇಲ್ಲದಂತಾಗಿದ್ದು, ಈಗ ರಾಜಕೀಯಕ್ಕೆ ರಿಯಲ್ ಎಸ್ಟೇಟ್‌ನವರೂ ಬಂದಿದ್ದಾರೆ. ಇವತ್ತಿನ ವ್ಯವಸ್ಥೆ ನೋಡಿದ್ರೆ ಎಲ್ಲಿ ನಿಂತಿದ್ದೇವೆ ಅಂತಾ ಭಯ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಧಾರವಾಡದ ಬೇಂದ್ರೆ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಹಿಂದೆ ಚುನಾವಣೆಯಲ್ಲಿ ಮುತ್ತೈದೆಯರು ಬೆಳಿಗ್ಗೆ ಬಂದು ಮೊದಲು ಮತ ಹಾಕುತ್ತಿದ್ದರು. ಆದರೀಗ ಆ ಸಂಸ್ಕೃತಿಯನ್ನು ಕಳೆದುಕೊಂಡಿದ್ದೇವೆ. 5 ಸಾವಿರ ಕೊಟ್ಟರೆ ಮತ ಹಾಕ್ತೇವೆ ಅನ್ನುವಂತ ಕೆಟ್ಟ ಸ್ಥಿತಿ ಸೃಷ್ಟಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕಾರಣಿ ಹಾಗೂ ಮತದಾರ ಇಬ್ಬರೂ ಭ್ರಷ್ಟರಾಗಿದ್ದಾರೆ. ನಾನು ಈ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲಲ್ಲ, ಪ್ರಜಾಪ್ರಭುತ್ವದ ಆತ್ಮವೇ ಚುನಾವಣೆ. ಆದರೆ, ಎಲ್ಲ ಕಡೆ ದುಡ್ಡು, ಭ್ರಷ್ಟಾಚಾರದಿಂದ ಧಕ್ಕೆಯಾಗ್ತಿದೆ ಎಂದರು. ಅವನು ಯಾವನೋ 6 ಸಾವಿರ ಕೊಟ್ಟು ಮತ ಹಾಕಿಸಿಕೊಳ್ತೇವೆ ಅಂದಿದ್ದಾನೆ. ಇನ್ನೊಬ್ಬ ಟಿಕೆಟ್‌ಗೆ 20 ಕೋಟಿ ಕೊಡ್ತೀನಿ ಅಂತಾನೆ. ನಾವೇ ಜನರನ್ನ ಭ್ರಷ್ಟರನ್ನಾಗಿ ಮಾಡ್ತಿದ್ದೇವೆ ಎಂದು ಕಿಡಿ ಕಾರಿದ್ದಾರೆ.