ಬೆಳಗಾವಿ: ನೆಹರೂ ಅವರ ಭಾವಚಿತ್ರವನ್ನು ಸುವರ್ಣಸೌಧದಲ್ಲಿ ಇಡಲು ನಮಗೇನೂ ಅಭ್ಯಂತರವಿಲ್ಲ. ಆದ್ರೆ ಟಿಪ್ಪು ಸುಲ್ತಾನ್ ಬಗ್ಗೆ ವಿರೋಧವಿದೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಗುಡುಗಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಗುಂಡು ಹೊಡೆದ್ರೂ ಸರಿ, ವಿಧಾನಸೌಧದಲ್ಲಿ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಿರುವ ಟಿಪ್ಪು ಭಾವಚಿತ್ರ ತೆಗೆಯಬೇಕು ಎಂದು ಸದನದಲ್ಲಿ ಆಗ್ರಹಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಟಿಪ್ಪು ಭಾವಚಿತ್ರ ಹಾಕಿದ್ರೆ ನಮ್ ಬಿಜೆಪಿ ಒಪ್ಪಲ್ಲ ಎಂದರು . ಟಿಪ್ಪುವಿನ ಇತಿಹಾಸವನ್ನು ನಾವು ಅರಿತುಕೊಳ್ಳಬೇಇದೆ. ಟಿಪ್ಪು ಒಬ್ಬ ಮತಾಂಧ ಯಾವುದೇ ಕಾರಣಕ್ಕೂ ಟಿಪ್ಪುನ ಒಪ್ಪಲು ಸಾಧ್ಯವಿಲ್ಲ,
ಸಾವರ್ಕರ್ ಭಾವಚಿತ್ರ ಅಳವಡಿಸಿದ್ದಕ್ಕೆ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿ ಹೋದರು. ಅವರದ್ದು ಅಷ್ಟೆ. ಸಿದ್ದರಾಮಯ್ಯ ಅವರು ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಇದೆ ಎಂದು ಆರೋಪ ಮಾಡ್ತಿದ್ದಾರೆ. ಹಾಗಾದ್ರೆ ಕಾಂಗ್ರೆಸ್‌ನವರು ಸುಭಾಷ್ ಚಂದ್ರಬೋಸ್ ಹಾಗೂ ಲಾಲ್ ಬಹದ್ದೂರ್ ಅವರ ಸಾವಿನ ವಿಷಯ ಬಹಿರಂಗಪಡಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಇನ್ನೂ ಎಂಇಎಸ್ ಮುಗಿದು ಹೋದ ಅಧ್ಯಾಯವಾಗಿದೆ. ಡಿಸೆಂಬರ್ 22 ರೊಳಗೆ ಪಂಚಮಸಾಲಿ ಮೀಸಲಾತಿ ಘೋಷಣೆ ಆಗುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.