ನವದೆಹಲಿ : ‘ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್’ ನ ಜಾವೆಲಿನ್ ವೀರ ನೀರಜ್ ಚೋಪ್ರಾ ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಐತಿಹಾಸಿಕ ಸಾಧನೆಗೆ ಮಾಡಿ ದೇಶದ ಮೊದಲ ಅಥ್ಲೆಟಿಕ್ ಆಟಗಾರನಾಗಿದ್ದಾರೆ.
ಹಂಗೇರಿ ದೇಶದ ಬುಡಾಪೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೋಪ್ರಾರ ಈ ಅಸಾಮಾನ್ಯ ಸಾಧನೆಗೆ ಅವರಿಗೆ ಶುಭಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಭಾವಂತರ ಶ್ರೇಷ್ಠತೆಯನ್ನು ಇವರ ಉದಾಹರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ತಮ್ಮದೇ ಸಮುದಾಯದ ನಾಯಕನ ಬಗ್ಗೆ ಬೇಸರ ಹೊರ ಹಾಕಿದ ನಿರ್ಮಲಾನಂದ ಸ್ವಾಮೀಜಿ
ಟ್ವಿಟ್ಟರ್ (X)ನಲ್ಲಿ ಶುಭಹಾರೈಸಿರುವ ಪ್ರಧಾನಿ ಮೋದಿ, ನೀರಜ್ ಅವರ ಸಮರ್ಪಣೆ, ನಿಖರತೆ ಮತ್ತು ಉತ್ಸಾಹವು ಅವರನ್ನು ಅಥ್ಲೆಟಿಕ್ಸ್‌ನಲ್ಲಿ ಕೇವಲ ಚಾಂಪಿಯನ್ ಮಾಡಿದ್ದಲ್ಲದೆ, ಅವರ ಸಾಧನೆಯು ಇಡೀ ಕ್ರೀಡಾ ಜಗತ್ತಿನಲ್ಲಿ ಸಾಟಿಯಿಲ್ಲದ ಶ್ರೇಷ್ಠತೆಯ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.
ಅಲ್ಲದೆ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿರುವ ಖುಷಿಯನ್ನು ಹಂಚಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿಮ್ಮ ಅಸಾಧಾರಣ 88.17-ಮೀಟರ್ ಎಸೆತದಲ್ಲಿ ಡೈಮಂಡ್ ಲೀಗ್ ಟ್ರೋಫಿ, ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಮತ್ತು ಒಲಂಪಿಕ್ ಚಿನ್ನವನ್ನು ಹೊಂದಿರುವ ಮೊದಲ ಭಾರತೀಯನಾಗಿದ್ದೀರಿ ಎಂದು ಟ್ಟಿಟ್ಟರ್(X)ನಲ್ಲಿ ಅಭಿನಂದಿಸಿದ್ದಾರೆ.
ನಿಮ್ಮ ಸಾಧನೆಗಳು ಇಡೀ ರಾಷ್ಟ್ರದ ಉತ್ಸಾಹವನ್ನು ಹೆಚ್ಚಿಸುತ್ತವೆ.ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಮತ್ತು ಸ್ಫೂರ್ತಿಯೊಂದಿಗೆ ‘ಚಂದ್ರನ ಮೇಲೆ’ ಇದ್ದಾನೆ ಎಂದು ಚಂದ್ರಯಾನದ ಯಶಸ್ಸನ್ನು ಯೋಗಿ ಸ್ಮರಿಸಿದ್ದಾರೆ.
ಅದ್ಭುತ ಪ್ರದರ್ಶನ ನೀಡಿರುವ ನಿಮ್ಮ ಆಟವು ಮತ್ತೊಮ್ಮೆ ಭಾರತಕ್ಕೆ ಹೆಮ್ಮೆ ತಂದಿದೆ. ನಿಮ್ಮ ತೇಜಸ್ಸು, ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ಇದೀಗ ನಿಮ್ಮನ್ನು ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯನನ್ನಾಗಿ ಮಾಡಿದೆ ಎಂದು ಹಾಡಿ ಹೊಗಳಿದ್ದಾರೆ.
ನೀವು ಬೆಳೆಸುತ್ತಿರುವ ಅದ್ಭುತ ಸಾಧನೆಗಳ ಪಟ್ಟಿಗೆ ಮತ್ತೊಂದು ಗರಿಯನ್ನು ಈ ಗೆಲುವು ಸೇರಿಸಿದೆ ಎಂಬುದಕ್ಕೆ ಸಾಕ್ಷಿಯಾಗಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೀರಜ್ ನಿಮ್ಮ ಶಕ್ತಿಯು ಇನ್ನಷ್ಟು ದ್ವಿಗುಣಗೊಳ್ಳಲಿ, ಇನ್ನಷ್ಟು ಶಕ್ತಿಯುತವಾಗಿ ಬೆಳೆಯಿರಿ ಮತ್ತು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಲಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಟ್ವೀಟ್ಟರ್ ಪೋಸ್ಟ್‌ನಲ್ಲಿ ಶುಭಹಾರೈಸಿದ್ದಾರೆ.