ಗದಗ: ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗ್ಬೇಕು ಅಂತಾ ಅವರ ಹಣೆಯಲ್ಲಿ ಬರೆದಿದ್ರೆ ಯಾರು ತಪ್ಪಿಸೋದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಶೆಫರ್ಡ್ ಇಂಟರ್ ನ್ಯಾಷನಲ್ ಸಂಘಟನೆ ವಾರ್ಷಿಕೋತ್ಸವ ಸಿದ್ದತಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಮಂತ್ರಿ ಆಗ್ತಾರೆ ಅಂತ ಕನಸು ಕಂಡಿದ್ರಾ..? ಪೊಲಿಟಿಕ್ಸ್ ಅನ್ನೋದು ಅವಕಾಶ, ಡೆಮಾಕ್ರಟಿಕ್ ಐಡಿಯಾಲಜಿನಲ್ಲಿ ಪೊಲಿಟಿಕ್ಸ್ ಸೇರಿಕೊಂಡಿದೆ, ಯಾವುದನ್ನೂ ತಳ್ಳಿಹಾಕೋದಕ್ಕೆ ಸಾಧ್ಯವಿಲ್ಲ.. ಏನ್ ಬೇಕಾದ್ರೂ ಆಗ್ಬಹುದು.. ಹಿಂದೆಯೂ ಪಾರ್ಲಿಮೆಂಟ್ ಮೇಂಬರ್ ಆಗಿದ್ದೆ.. ಮತ್ತೊಮ್ಮೆ ಆಗೋ ಬಯಕೆ ಇದೆ.. ಅವಕಾಶ ಸಿಗಬೇಕಷ್ಟೇ ಎಂದು ತಿಳಿಸಿದರು.
ಇದನ್ನೂ ಓದಿ : ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಶಿಫ್ಟ್
ಇದೇ ವೇಳೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ ಹೆಚ್ ವಿಶ್ವನಾಥ್, ಹೆಸರು ಘೋಷಣೆ ಮುಂಚೆ ಹಲವಾರು ಹೆಸರು ಕೇಳಿಬರುತ್ತಿರುತ್ತವೆ, ಟಿಕೆಟ್ ಕೊಡೋದು ಒಬ್ಬರಿಗೆ.. ಯತೀಂದ್ರ ಆದ್ರೂ ಪರವಾಗಿಲ್ಲ ,ಯತೀಂದ್ರ ಅವರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು.. ಯಂಗ್ ಸ್ಟಾರ್ ಎಂದು ಹೊಗಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.