ವಿಜಯಪುರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ. ಈ ಬಗ್ಗೆ ಸತೀಶ ಜಾರಕಿಹೊಳಿ ಈಗಾಗಲೇ ಮೀಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಅದನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಿರ್ಣಯ ಮಾಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ನಾನು ಹೇಳಿದ ಲಿಸ್ಟ್ ಮಾತ್ರ ಆಗಬೇಕು ಎಂದು ಸಿಎಂ ಪುತ್ರ ಯತೀಂದ್ರ ಅವರು ಮಾತನಾಡಿದ ವಿಡಿಯೋ ವೈರಲ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಇದರ ಬಗ್ಗೆ ಯಾವ ವಿಚಾರವು ಗೊತ್ತಿಲ್ಲ, ಸತ್ಯಾಸತ್ಯತೆಯನ್ನು ತಿಳಿದುಕೊಂಡು ಮಾತನಾಡುತ್ತೇನೆ. ಈಗ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಂದಿದೆ. ಈಗ ಏನು ಬೇಕಾದರೂ ಬದಲಾವಣೆ ಮಾಡಬಹುದು ಎಂದು ಯತೀಂದ್ರ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: ‘ಯತೀಂದ್ರ ಮಾತಾಡಿದ್ದು ಸಿಎಸ್ಆರ್ ಫಂಡಿಂಗ್ ಬಗ್ಗೆ, ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ’
ಈ ಹಿಂದೆ ನನ್ನದೇ ದ್ವನಿಯನ್ನು, ಮಹಾರಾಷ್ಟ್ರದವರೊಬ್ಬರು ಮಿಮಿಕ್ರಿ ಮಾಡಿದ್ದಾನೆ. ಅವನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಹಾಕಿಸಿದ್ದೇವೆ. ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಯಿಂದ ಈಗ ಏನು ಬೇಕಾದರೂ ಬದಲಾವಣೆ ಮಾಡಬಹುದು. ಹಸಿರು ಇರೋ ನಿಮ್ಮ ಶರ್ಟ್ ಬಣ್ಣವನ್ನು ಕೆಂಪು ಮಾಡಬಹುದು ಎಂದು ಹೇಳಿದ್ದಾರೆ.
ಕ್ರಿಕೆಟ್ ವಿಶ್ವಕಪ್ ಟೀಂ ಇಂಡಿಯಾ ಪೈನಲ್ ಪ್ರವೇಶ ವಿಚಾರ ಕುರಿತು ಇಂಡಿಯಾ ಕ್ರಿಕೆಟ್ ಟೀಮ್ ಗೆ ಶುಭಕೋರಿದ ಅವರು, ಭಾರತ ವಿಶ್ವಕಫ್ ಗೆಲ್ಲಲಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲ ಆಟಗಾರರಿಗೆ ಶುಭಕೋರುತ್ತೇನೆ. ನಿನ್ನೆ ನಾನು ಸಹ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಮ್ಯಾಚ್ ನೋಡಿದೆ. ಶಮಿ ಉತ್ತಮವಾಗಿ ಆಟವಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ ಸಿಇಒ ಭೇಟಿ ಮಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.