ಹಾವೇರಿ: ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ಮಾಡಿದರು. ನನ್ನನ್ನು ಚುನಾವಣೆಯಲ್ಲಿ ಸೋಲಿಸ್ತೇನೆ ಅಂತಾ ಪ್ರಮಾಣ ಮಾಡ್ತಾನೆ. ಅದಕ್ಕೆಲ್ಲ ನಾನು ಹೆದರುವ ಮಗ ಅಲ್ಲ ಎಂದು ಹೇಳಿದರು.
ನಾನು ಕೂಡ ಪಕ್ಷ ಕಟ್ಟಲು ಹೋರಾಟ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರ ತೆಗೆದು ಬಿಜೆಪಿ ಸರ್ಕಾರ ಸ್ಥಾಪನೆ ಮಾಡುವಾಗ ನನ್ನ ಕರೆದು ಸಚಿವ ಸ್ಥಾನ ತ್ಯಾಗ ಮಾಡಬೇಕೆಂದು ಬಿಎಸ್ವೈ ಮನವಿ ಮಾಡಿದ್ರು. ನಾನು ಅದಕ್ಕೆ ಒಪ್ಪಿಕೊಂಡು ಸಚಿವ ಸ್ಥಾನ ತ್ಯಾಗ ಮಾಡಿದೆ. ಆದ್ರೆ ಮೀಸಲಾತಿ ಕೊಡಬೇಕೆಂದು ಒತ್ತಾಯ ಮಾಡಿದೆ.
ನನಗೆ ಟಿಕೆಟ್ ನೀಡುವುದು ಸಿಎಂ ಕೈಯಲ್ಲಿ ಇಲ್ಲ. ನನಗೆ ಹೈಕಮಾಂಡ್ ಟಿಕೆಟ್ ನೀಡುವ ವಿಶ್ವಾಸ ಇದೆ. ನಾನು ಮತ್ತೆ ಶಾಸಕನಾಗಿ ವಿಧಾನಸೌಧಕ್ಕೆ ಹೊಗುತ್ತೇನೆ, ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯದ ಬಗ್ಗೆ ನಾನು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಾವು ಕೇಂದ್ರದವರಿಗೆ ಎಲ್ಲವನ್ನೂ ತಿಳಿಸುತ್ತೇವೆ. ಈ ಮುಖ್ಯಮಂತ್ರಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.