ವಿಜಯಪುರ: ಲಕ್ಷ್ಮಣ ಸವದಿ ಕಾಂಗ್ರೆಸ್ಗೆ ಸೇರಿದ್ದು ದುಡುಕಿನ ನಿರ್ಧಾರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷದಲ್ಲಿದ್ದರೆ ಅವರಿಗೆ ಉತ್ತಮ ಭವಿಷ್ಯ ಇರುತ್ತಿತ್ತು, ಪಕ್ಷದಲ್ಲಿ ಸವದಿ ಬಗ್ಗೆ ಬಹಳ ಗೌರವವಿತ್ತು. ರಾಜಕಾರಣದಲ್ಲಿ ನನಗೂ ಸಾಕಷ್ಟು ಅಪಮಾನವಾಗಿದೆ ಎಂದರು.
ಲಕ್ಷ್ಮಣ ಸವದಿ ಬಗ್ಗೆ ಎಲ್ಲಿಯೂ ನಾನು ಟೀಕೆ ಮಾಡಿಲ್ಲ, ಅವರು ನನಗೆ ಟೀಕೆ ಮಾಡಿಲ್ಲ ಎಂದು ಹೇಳಿದರು. ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಚುನಾವಣೆಯಲ್ಲಿ ಯಾವುದೆ ಹಿನ್ನಡೆ ಆಗಲ್ಲ. ದೇಶಕ್ಕೆ ಮೋದಿಯಂತ ನಾಯಕ ಬೇಕಿದೆ. ಜನರು ರಾಹುಲ್ ಗಾಂಧಿಯಂತ ಅರೆ ಹುಚ್ಚನನ್ನ ಪ್ರಧಾನಿ ಮಾಡುತ್ತಾರೆ. ಮೋದಿ ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ. ಇದನ್ನ ನಾನು ಸ್ವಾಗತಿಸ್ತೇನೆ ಎಂದು ಹೇಳಿದರು.
ತಾಳ್ಮೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು. ನಾನು ಮಂತ್ರಿ, ಡಿಸಿಎಂ ಆಗಲು ಅರ್ಹನಾಗಿದ್ದೆ ಆದರೆ ಪದವಿ ನೀಡಲಿಲ್ಲ. ಪಕ್ಷಕ್ಕೆ ಅಗತ್ಯ ಬಿದ್ದಾಗ ಉನ್ನತ ಸ್ಥಾನಮಾನ ನೀಡುತ್ತಾರೆ. ಕೋಪ ಮಾಡಿಕೊಂಡು ಪಕ್ಷ ಬಿಡಬಾರದು ಎಂದು ಅಭಿಪ್ರಾಯಪಟ್ಟರು.