Monday, December 4, 2023
spot_img
- Advertisement -spot_img

ದೆಹಲಿ ಅಬಕಾರಿ ನೀತಿ ಹಗರಣ; ED ನೋಟಿಸ್ ಅಲ್ಲ ಮೋದಿ ನೋಟಿಸ್ ಸ್ವೀಕರಿಸಿದ್ದೇನೆ: ಕವಿತಾ

ದೆಹಲಿ: ಇಡಿ (ED) ನೀಡಿರುವ ನೋಟಿಸ್‌ ಅಲ್ಲ ಬದಲಿಗೆ ಇದನ್ನು ನಾನು ಮೋದಿ ನೋಟಿಸ್ ಎನ್ನುತ್ತೇನೆ ಎಂದು ಎಂಎಲ್‌ಸಿ ಕೆ.ಕವಿತಾ ಟೀಕಿಸಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಿಆರ್‌ಎಸ್‌ ಪಕ್ಷದ ಕವಿತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಈ ಕುರಿತು ಮಾತನಾಡಿದ ಅವರು, ‘ಹೌದು ನಾನು ಮೋದಿ ನೋಟಿಸ್ ಸ್ವೀಕರಿಸಿದ್ದೇನೆ ಮತ್ತು ಅದನ್ನು ನಮ್ಮ ಬಿಆರ್‌ಎಸ್ ಕಾನೂನು ಕೋಶಕ್ಕೆ ರವಾನಿಸಿದ್ದೇನೆ. ಕಾನೂನು ಕೋಶದ ಸಲಹೆಯಂತೆ ನಡೆದುಕೊಳ್ಳುತ್ತೇನೆ. ಈ ಆದೇಶ ರಾಜಕೀಯ ಪ್ರೇರಿತವಾಗಿವೆ. ಚುನಾವಣೆಗೆ ಒಳಪಟ್ಟಿರುವ ರಾಜ್ಯಗಳಲ್ಲಿ ಬಿಜೆಪಿಯು ಇಂತಹ ಸೂಚನೆಗಳನ್ನು ನೀಡಲು ಅದೇ ವಿಧಾನವಾಗಿದೆ ಎಂದರು.

ಇದನ್ನೂ ಓದಿ: ಇಂದಿನಿಂದ ಏಟಿಗೆ ಏಟು, ಯಾರಿಗೂ ಹೆದರೋ ಮಾತೆ ಇಲ್ಲ; ಬಾಲಯ್ಯ

ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಪುತ್ರಿ ಕವಿತಾ ಅವರನ್ನು ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೊದಲು ಬಾರಿ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ನಂತರ ಮಾರ್ಚ್ 16 ರಂದು ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಯನ್ನು ಉಲ್ಲೇಖಿಸಿ ವಿಚಾರಣೆಯಿಂದ ಹೊರಗುಳಿದಿದ್ದರು. ಈ ಮನವಿಯನ್ನು ತಿರಸ್ಕರಿಸಿದ್ದ ಇಡಿ ಅಧಿಕಾರಿಗಳು ಮಾರ್ಚ್ 20 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನ ಛಿದ್ರವಾದಾಗ ಭಯೋತ್ಪಾದಕ ದಾಳಿಗಳು ಕೊನೆಯಾಗುತ್ತೆ; ವಿ.ಕೆ ಸಿಂಗ್

ಏನಿದು ಹಗರಣ?

ಜುಲೈ 31ರಂದು ಹೊಸ ಅಬಕಾರಿ ನೀತಿ ರದ್ದು ಆಮ್ ಆದ್ಮಿ ಪಕ್ಷದ (ಎಎಪಿ) ಮಹತ್ವಾಕಾಂಕ್ಷೆಯ ದೆಹಲಿ ಅಬಕಾರಿ ನೀತಿಯನ್ನು 31 ಜುಲೈ 2022 ರಂದು ರದ್ದುಗೊಳಿಸಲಾಗಿತ್ತು. ಹೊಸ ನೀತಿಯನ್ನು ರದ್ದುಗೊಳಿಸಿದ ನಂತರ, ದೆಹಲಿ ಸರ್ಕಾರವು ನವೆಂಬರ್ 17, 2020 ರ ಮೊದಲು ಜಾರಿಗೆ ತಂದ ಹಳೆಯ ಅಬಕಾರಿ ಆಡಳಿತವನ್ನು ಮರಳಿ ತರಲು ನಿರ್ಧರಿಸಿತ್ತು. ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಈ ನೀತಿಯಲ್ಲಿ ಸಾವಿರಾರು ಕೋಟಿ ರೂ,. ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ. ಇದರಲ್ಲಿ ದಿಲ್ಲಿ ಸರ್ಕಾರದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಮಾತ್ರವಲ್ಲದೆ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು ಕೆ ಕವಿತಾ ಮತ್ತು ಅವರ ಆಪ್ತರ ಹೆಸರು ಕೂಡ ಇದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles