ಬೆಂಗಳೂರು: ‘ಸದ್ಯಕ್ಕೆ ನಾವು ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸ್ತೀವಿ; ನಾಗಪುರ ಎಜುಕೇಷನ್ ಸಿಸ್ಟಮ್ ನಾವು ತರಲ್ಲ.ಇವತ್ತು ಕರ್ನಾಟಕ ರಾಜ್ಯದ ಪ್ರಾಥಮಿಕ, ಉನ್ನತ ಶಿಕ್ಷಣ ಸಭೆ ನಡೆಸಲಾಗಿದೆ. ಅವರ ಇಲಾಖೆಯ ಸಮಸ್ಯೆಗಳನ್ನು ಚರ್ಚೆ ಮಾಡಲಾಗಿದೆ. ನೂತನ ಶಿಕ್ಷಣ ನೀತಿ ಬಗ್ಗೆಯೂ ಚರ್ಚೆ ಮಾಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ನಮ್ಮ ರಾಜ್ಯದ ಶಿಕ್ಷಣ ಮಟ್ಟ ಇಡೀ ರಾಷ್ಟ್ರದಲ್ಲಿ ಉತ್ತಮವಾಗಿದೆ. ಸಭೆಯಲ್ಲಿ ಅನೇಕ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಕೇಂದ್ರದ ಹಣ ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ನಮಗೆ ಕಡಿಮೆ ಇದೆ ಎಂದು ಹೇಳಿದ್ದಾರೆ. ರಾಜ್ಯದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಬದ್ದವಾಗಿದೆ’ ಎಂದರು.
ಇದನ್ನೂ ಓದಿ; ತಮಿಳುನಾಡು-ಕರ್ನಾಟಕ ಅಣ್ಣ ತಮ್ಮಂದಿರಂತೆ ಎಂದಿದ್ದ ಎಚ್‌ಡಿಕೆ ಮಾತನ್ನು ಪಾಲಿಸುತ್ತಿದ್ದೇನೆ: ಡಿಕೆಶಿ
‘ತರಾತುರಿಯಲ್ಲಿ ಎನ್ ಇಪಿ ಜಾರಿ ಮಾಡಲು ಹೊರಟರು; ಮಹಾರಾಷ್ಟ್ರ ಸೇರಿ ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯದಲ್ಲಿ ಎನ್ಇಪಿ ಇಲ್ಲ. ಯಾವುದೇ ಪಾಲಿಸಿ ಜಾರಿಗೆ ತರಬೇಕಾದರೆ ಮೊದಲು ಮೂಲಭೂತ ಸೌಕರ್ಯ ಕಲ್ಪಿಸಬೇಕು. ನಮ್ಮಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಕೂಡ ಇದೆ. ಬಿಜೆಪಿ ಜಾರಿ ಮಾಡಿದ ಎನ್ ಇಪಿ ಯಲ್ಲಿ ನಮಗೆ ಸಮಾಧಾನ ಇಲ್ಲ. ನಾವು ಆರೋಗ್ಯ ಕ್ಷೇತ್ರದಲ್ಲೂ ಮುಂದಿದ್ದೇವೆ. ಎಲ್ಲರ ಬಳಿ ಚರ್ಚೆ ಮಾಡಲಾಗಿದೆ; ಎನ್ ಇಪಿ ಅಳವಡಿಕೆ ಇಲ್ಲ, ಅದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ. ಮುಂದೆ ಏನು ಮಾಡಬೇಕು, ಹೊಸ ಪೀಳಿಗೆಗೆ ಅನುಗುಣವಾಗಿ ತೀರ್ಮಾನ ಮಾಡಲಾಗುತ್ತದೆ. ಸದ್ಯಕ್ಕೆ ನಾವು ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸ್ತೀವಿ’ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.