ಬೆಂಗಳೂರು: ಹಣ ಕೊಟ್ಟರೆ ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ. ಇಲ್ಲಿ ಟಕೆಟ್ ಮಾರಾಟಕ್ಕಿಲ್ಲ ಎಂದು ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಉದ್ಯಮಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಸಂಬಂಧ ಬಿಜೆಪಿ ನಾಯಕ ಸಿ.ಟಿ ರವಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮೋಸ ಹೋಗುವರು ಇರುವ ತನಕ ಮೋಸ ಮಾಡುವವರು ಇರ್ತಾರೆ. ಬಿಜೆಪಿಯಲ್ಲಿ ಟಿಕೆಟ್ ಸೇಲ್‌ಗಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ. ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿ ಸಾಧ್ಯವಿಲ್ಲ.
ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮುಂದೆ ಯಾರು ಮಾಡಬಾರದು ಎಂದರು.
ಇದನ್ನೂ ಓದಿ: ಚೈತ್ರಾ ವಿಷ ಸೇವಿಸಿಲ್ಲ; ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ ವೈದ್ಯರು!
ಪ್ರಕರಣದಲ್ಲಿ ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತಿದೆ, ಮೋಸ ಮಾಡಲೆಂದು ಹೆಸರು ಬಳಕೆ ಮಾಡ್ತಾರೆ. ಒಂದು ಪಕ್ಷದಲ್ಲಿ ಚುನಾವಣಾ ಸಮಿತಿಯಲ್ಲಿದ್ದವರಿಗೆ ಟಿಕೆಟ್ ಕೊಡಿಸಲು ಸಾಧ್ಯವಿಲ್ಲ. ಸಭೆಯಲ್ಲಿ ಚರ್ಚೆಯ ಬಳಿಕ ಒಮ್ಮತ ನಿರ್ಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವ ನಾಯಕರ ಕುರಿತು ಪ್ರತಿಕ್ರಿಯಿಸಿದ ಅವರು, ನಾವೀಗ ಅಧಿಕಾರ ಕಳೆದುಕೊಂಡಿದ್ದೇವೆ. ಅಧಿಕಾರ ಕಳೆದುಕೊಂಡಾಗ ಕೆಲವರು ಪಕ್ಷದಿಂದ ಹೋಗಬಹುದು. ಇದಕ್ಕಿಂತ ಕಷ್ಟ ಕಾಲದಲ್ಲಿ ಪಕ್ಷ ಕಟ್ಟಿದ್ದೇವೆ. ಎತ್ತಿನ ಗಾಡಿ ಮೇಲೆ ಹೆಚ್ಚು ಜನರು ಕುಳಿತರೆ ಮುಂದೆ ಹೋಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸಂವಿಧಾನ ಪೀಠಿಕೆ ವಾಚನಕ್ಕೆ ಆಹ್ವಾನ ನೀಡಿದ್ರೂ ಜೆಡಿಎಸ್-ಬಿಜೆಪಿ ಗೈರು: ಸಿಎಂ ವಿಷಾದ
ನಾವು ಹಾಲಿ ಶಾಸಕರ ಸೇರಿಸಿಕೊಂಡು ಅಧಿಕಾರಿಕ್ಕೆ ಬಂದಿಲ್ಲ, ನೀವು ಹಾಲಿ ಶಾಸಕರ ಸೇರಿಸಿಕೊಂಡು ಅಧಿಕಾರಕ್ಕೆ ಬರ್ತೀರಾ? ಇದನ್ನು ನೀವೇ ಯೋಚಿಸಬೇಕು ಎಂದು ಡಿ.ಕೆ ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.