ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದು ಚುನಾವಣೆ ಸಮಯ ಬಂದಾಗ ಜನ ನಿರ್ಧಾರ ಮಾಡ್ತಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ಎಲ್ಲಾ ಕಡೆ ನಮ್ಮನ್ನ ಪ್ರೀತಿಸ್ತಾರೆ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ನನ್ನನ್ನು ಕರೆಯುತ್ತಾರೆ. ಹಾಗಾಗಿ ನಾನು ಎಲ್ಲಾ ಕಡೆ ಹೋಗಬೇಕಾಗುತ್ತೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ.

ಇದನ್ನೂ ಓದಿ : ಅವತ್ತು ಸಿದ್ದರಾಮಯ್ಯ ನಮ್ ಮನೆಗೆ ಬಂದು ಕಣ್ಣೀರು ಹಾಕಿದ್ರು, ಒಂದು ಬಕೆಟ್ ಇಟ್ಟಿದ್ರೆ ತುಂಬೋಗ್ತಿತ್ತು : ಹೆಚ್‌ಡಿಕೆ ಲೇವಡಿ

ಸದನದಲ್ಲಿ ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ. ಎರಡಂಕಿ ದಾಟಲ್ಲ ಅಂತಾ ಲೇವಡಿ ಮಾಡಿದ್ದಾರೆ. ಅಂತವರಿಗೆ ಪಕ್ಷ ಕಟ್ಟಿ ತೋರಿಸ್ತೀವಿ. ಎನ್‌ಡಿಎ ಸರ್ಕಾರ ರಚನೆ ಮಾಡ್ತೀವಿ. ಎಲ್ಲಿ ಸ್ಪರ್ಧೆ ಎನ್ನುವುದು ಮುಂದೆ ತೀರ್ಮಾನ ಮಾಡೋಣ. ನಮ್ಮ ಉದ್ದೇಶ ನಮ್ಮ ಗುರಿ ಈಡೇರಬೇಕು. ಜೆಡಿಎಸ್ ಎಲ್ಲಿದೆ ಅಂತಾರೆ. ವಿಧಾನಸಭೆಯಲ್ಲಿ ಹೇಗೆ ಚರ್ಚೆ ಆಗುತ್ತೆ ನೋಡಿದ್ದೇವೆ. ಪಕ್ಷ ಕಟ್ಟಿ ತೋರಿಸ್ತೇವೆ. ನಮ್ಮ ಗುರಿ ಮೈತ್ರಿ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದರು.

ಇನ್ನು ನಾವು ಯಾವುದೇ ಬೇಡಿಕೆ ಇಟ್ಟು ನಾವು ಮೈತ್ರಿ ಮಾಡಿಕೊಂಡಿಲ್ಲ. ಮೋದಿ, ಅಮಿತ್, ಕೇಂದ್ರದ ನಾಯಕರು ಏನು ನಿರ್ಧಾರ ಮಾಡ್ತಾರೋ ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ನಿಖಿಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *