ತಮಿಳುನಾಡು : ನೆರೆಯ ತಮಿಳುನಾಡಿನಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಧಾನಸಭಾ ಚುನಾವಣೆಗೆ ದಿನಗಣನೆ ಹತ್ತಿರವಾಗ್ತಿದ್ದಂತೆ ಹಲವು ನಾಯಕರು ಅಖಾಡಕ್ಕಿಳಿದಿದ್ದಾರೆ. ಈ ನಡುವೆ ಹೊಸ ಪಕ್ಷ ಘೊಷಿಸಿರುವ ನಟ ವಿಜಯ್ ಅಬ್ಬರದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮಾರ್ಚ್ 30ರಂದು ದಳಪತಿ ವಿಜಯ್ ತಮ್ಮ ಬೆಂಬಲಿಗರ ಸಮೂಹದೊಂದಿಗೆ ಪೆರಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಆಸ್ತಿ ವಿವರ ತಮಿಳುನಾಡು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಜಯ್ ಆಸ್ತಿ ಘೋಷಣೆ ಎಷ್ಟಿದೆ ಗೊತ್ತಾ..?
ನಾಮಪತ್ರ ಸಲ್ಲಿಕೆಯ ನಂತರ ಹೆಚ್ಚು ಚರ್ಚೆಗೀಡಾದ ಮತ್ತೊಂದು ವಿಷಯ ಏನಂದ್ರೆ ವಿಜಯ್ ಘೋಷಿಸಿದ ಆಸ್ತಿ ವಿವರಗಳು. ನಾಮಪತ್ರ ದಾಖಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಚಿರಾಸ್ತಿ ಮತ್ತು ಸ್ತಿರಾಸ್ತಿ ವಿವರಗಳನ್ನು ಅಧಿಕೃತವಾಗಿ ನೀಡಬೇಕಾಗುತ್ತದೆ. ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು ₹620 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದಾಗಿ ವಿಜಯ್ ಅವರು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.
ಟಿವಿಎಸ್ ಎಕ್ಸ್‌ಎಲ್ ಸೂಪರ್ ಮೊಪೆಡ್, ಮಾರುತಿ ಸ್ವಿಫ್ಟ್, ನಾಲ್ಕು ಐಷಾರಾಮಿ ಕಾರುಗಳು, 883 ಗ್ರಾಂ ಚಿನ್ನ ಸೇರಿದಂತೆ ವಿವಿಧ ಬಗೆಯ ಆಸ್ತಿಗಳನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ವಿಜಯ್ ತಿಳಿಸಿದ್ದಾರೆ.
₹404 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹220 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಅವರು ವಿವರಿಸಿದ್ದಾರೆ. ಹಲವು ಬ್ಯಾಂಕ್ ಠೇವಣಿಗಳು, ಎರಡು ಬಿಎಂಡಬ್ಲ್ಯು, ಟೊಯೋಟಾ ಲೆಕ್ಸಸ್, ಟೊಯೋಟಾ ವೆಲ್‌ಫೈರ್‌ನಂತಹ ಐಷಾರಾಮಿ ಕಾರುಗಳನ್ನು ವಿಜಯ್ ಹೊಂದಿದ್ದಾರೆ.
2024-25ರ ಆರ್ಥಿಕ ವರ್ಷದಲ್ಲಿ ₹184.5 ಕೋಟಿ ಆದಾಯ ಗಳಿಸಿರುವುದಾಗಿ ವಿಜಯ್ ಘೋಷಿಸಿದ್ದಾರೆ.
ಪತ್ನಿ ಸಂಗೀತಾ ಬಳಿ ₹15.76 ಕೋಟಿ ಮೌಲ್ಯದ ಆಸ್ತಿಗಳಿವೆ ಎಂದೂ ಅವರು ಉಲ್ಲೇಖಿಸಿದ್ದಾರೆ.ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ತಮಿಳಿನ ಜನಪ್ರಿಯ ನಟ ವಿಜಯ್ ಅವರು ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು ₹620 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದಾಗಿ ವಿಜಯ್ ಅವರು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.
ಟಿವಿಎಸ್ ಎಕ್ಸ್‌ಎಲ್ ಸೂಪರ್ ಮೊಪೆಡ್, ಮಾರುತಿ ಸ್ವಿಫ್ಟ್, ನಾಲ್ಕು ಐಷಾರಾಮಿ ಕಾರುಗಳು, 883 ಗ್ರಾಂ ಚಿನ್ನ ಸೇರಿದಂತೆ ವಿವಿಧ ಬಗೆಯ ಆಸ್ತಿಗಳನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ವಿಜಯ್ ತಿಳಿಸಿದ್ದಾರೆ.
₹404 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹220 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಅವರು ವಿವರಿಸಿದ್ದಾರೆ. ಹಲವು ಬ್ಯಾಂಕುಗಳಲ್ಲಿನ ಠೇವಣಿಗಳು, ಎರಡು ಬಿಎಂಡಬ್ಲ್ಯು, ಟೊಯೋಟಾ ಲೆಕ್ಸಸ್, ಟೊಯೋಟಾ ವೆಲ್‌ಫೈರ್‌ನಂತಹ ಐಷಾರಾಮಿ ಕಾರುಗಳು ಸೇರಿವೆ. 2024-25ರ ಆರ್ಥಿಕ ವರ್ಷದಲ್ಲಿ ₹184.5 ಕೋಟಿ ಆದಾಯ ಗಳಿಸಿರುವುದಾಗಿ ವಿಜಯ್ ಘೋಷಿಸಿದ್ದಾರೆ.
ಪತ್ನಿ ಸಂಗೀತಾ ಬಳಿ ₹15.76 ಕೋಟಿ ಮೌಲ್ಯದ ಆಸ್ತಿಗಳಿವೆ ಎಂದೂ ಅವರು ಉಲ್ಲೇಖಿಸಿದ್ದಾರೆ. ಅದ್ರೆ ವಿಜಯ್ ಇನ್ನಷ್ಟು ಆಸ್ತಿ ವಿವರಗಳನ್ನ ಬಚ್ಚಿಟ್ಟಿದ್ದಾರೆ ಎಂದು ತಮಿಳುನಾಡು ರಾಜಕಾರಣದಲ್ಲಿ ಚರ್ಚೆಯಾಗ್ತಿದೆ.