ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಐಫೋನ್ ಕಾಟ, ಯುವಕನ ಬೇಡಿಕೆ ಕೇಳಿ ಶೆಟ್ಟರ್ ಸುಸ್ತು..!

ಬೆಳಗಾವಿ : ಮಾಜಿ ಸಿಎಂ ಹಾಗೂ ಹಾಲಿ ಸಂಸದ ಜಗದೀಶ್ ಶೆಟ್ಟರ್‌ (Jagadish Shettar) ಅವರಿಗೆ ದಿಢೀರ್ ಹೊಸ ತಲೆನೋವು ಶುರುವಾಗಿದೆ. ಹಾಗಂತ ಇದು ರಾಜಕೀಯ ತಲೆನೋವು ಅಲ್ಲ, ಸಂಸದ ಜಗದೀಶ್ ಶೆಟ್ಟರ್‌ ಅವರಿಗೆ ಎದುರಾಗಿರುವ ಸಮಸ್ಯೆ ಐಫೋನ್ 17 ಪ್ರೋ ಮ್ಯಾಕ್ಸ್‌ಗೆ (iphone 17 pro max) ಸಂಬಂಧಿಸಿದ್ದು.

ಸಂಸದ ಶೆಟ್ಟರ್‌ ಅವರಿಗೆ ಐಫೋನ್ 17 ಪ್ರೋ ಮ್ಯಾಕ್ಸ್ ಕೊಡಿಸುವಂತೆ ಯುವಕನೊಬ್ಬ ಮೇಲಿಂದ ಮೇಲೆ ಕೆರೆ ಮಾಡಿ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದಾನೆ. ಶಾಸಕರು ಮತ್ತು ಸಂಸದರಿಗೆ ಕ್ಷೇತ್ರದ ಜನರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಆಗಾಗ ಕಾಲ್ ಮಾಡಿ, ತಮ್ಮ ಕುಂದು ಕೊರತೆ ಹೇಳಿಕೊಳ್ಳುವುದು ಮಾಮೂಲು. ಆದರೆ ಇಲ್ಲೊಬ್ಬ ಮಾತ್ರ ತನಗೆ ಐಫೋನ್ 17 ಪ್ರೋ ಮ್ಯಾಕ್ಸ್ ಕೊಡಿಸುವಂತೆ ಪದೇ ಪದೇ ಫೋನ್ ಕಾಲ್ ಮಾಡಿ ವಿಚಿತ್ರ ಬೇಡಿಕೆ ಇಟ್ಟಿದ್ದಾನಂತೆ.

ಪ್ರತೀಕ್ ಮಲಕ ಎಂಬ ಯುವಕನ ಈ ವಿಚಿತ್ರ ಬೇಡಿಕೆಗೆ ಸಂಸದ ಜಗದೀಶ್ ಶೆಟ್ಟರ್‌ ಅವರು ಗರಂ ಆಗಿ ಕಾಲ್ ಕಟ್ ಮಾಡಿದ್ದಾರೆ. ಮತ್ತೊಂದು ಕಡೆ ಸಂಸದ ಜಗದೀಶ್ ಶೆಟ್ಟರ್‌ಗೆ ಕಾಲ್ ಮಾಡಿ ಯುವಕ ಐಫೋನ್‌ಗೆ ಬೇಡಿಕೆ ಇಟ್ಟಿರೋ ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಜನ ಈ ಆಡಿಯೋ ಕೇಳಿ ನಗಬೇಕೋ? ಕೋಪ ಮಾಡಿಕೊಳ್ಳಬೇಕೋ? ಅನ್ನೋ ಗೊಂದಲದಲ್ಲಿ ಇದ್ದಾರೆ.

ಒಟ್ಟಾರೆ ಹೇಳುವುದಾದರೆ ನೀರು ಬರಲ್ಲ, ಕರೆಂಟ್ ಇಲ್ಲ, ಊರಿಗೆ ಬಸ್ ಬರಲ್ಲ, ಆಸ್ಪತ್ರೆ ಇಲ್ಲ, ಸ್ಕೂಲ್ ಇಲ್ಲ ಅಂತೆಲ್ಲಾ ವಿವಿಧ ದೂರು ಹೇಳುವ ಜನ ಇದ್ದಾರೆ. ಆದರೆ ಈ ಯುವಕನಿಗೆ ಮಾತ್ರ ಐಫೋನ್ ಹುಚ್ಚು ಹಿಡಿದಿದ್ದು, ಅದನ್ನ ನೀವೇ ಬಿಡಿಸಿ ಬದುಕಿನ ಪಾಠ ಮಾಡಿ ಎಂದು ಇದೀಗ ಸಂಸದ ಜಗದೀಶ್ ಶೆಟ್ಟರ್‌ ಅವರಿಗೆ ಜನರು ಸೋಷಿಯಲ್ ಮೀಡಿಯಾ ಮೂಲಕ ಸಲಹೆ ನೀಡುತ್ತಾ ಇದ್ದಾರೆ. ಹಾಗೇ ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕೂಡ ಹವಾ ಕ್ರಿಯೆಟ್ ಮಾಡಿದೆ.

Leave a Reply

Your email address will not be published. Required fields are marked *