ಮುಸನ್ಮಾನ ಹೆಣ್ಣು ಮಕ್ಕಳಿಗಲ್ಲ, ಸಿದ್ದರಾಮಯ್ಯ ಡಿಕೆಶಿಗೆ ಬುರ್ಕಾ ಅವಶ್ಯಕತೆ ಇದೆ, ಕಾಲೆಳೆದ ಪ್ರತಾಪ್ ಸಿಂಹ

ಮೈಸೂರು : ಮುಸಲ್ಮಾನ ಹೆಣ್ಣುಮಕ್ಕಳಿಗೆ ಬುರ್ಖಾ ಬೇಕೋ ಬೇಡ್ವೋ ಗೊತ್ತಿಲ್ಲ. ಆದ್ರೆ ಕಳೆದ ಮೂರು ವರ್ಷಗಳಲ್ಲಿ ಕರ್ನಾಕದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ ಮುಚ್ಚಿಕೊಳ್ಳಲು ಬುರ್ಖಾ ಬೇಕಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಯಾರು ಹಿಬಾಜ್‌ಗೆ ಅವಕಾಶ ಕೇಳಿಲ್ಲ. ಆದರೆ ಹಿಂದೂಗಳನ್ನ ಉರಿಸಲು ಕಾಂಗ್ರೆಸ್ ಈ ರೀತಿ ಮಾಡಿದೆ. ಕಳೆದ ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಮೂರುಕಾಸಿನ ಕೆಲಸ ಮಾಡದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಮುಖ ಮುಚ್ಚಲು ಬುರ್ಖಾ ಬೇಕಿದೆ ಎಂದರು.

ಇದನ್ನೂ ಓದಿ : ಇಂದಿರಾ ಗಾಂಧಿ ನಂತರ ದೇಶದಲ್ಲಿ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಪ್ರಧಾನಿ ಮೋದಿ ಮಾತ್ರ : ಕೆ.ಎನ್.ರಾಜಣ್ಣ

ಕಾಂಗ್ರೆಸ್ ಸರ್ಕಾರ ಸಮವಸ್ತ್ರ ಸಂಹಿತೆ ಬದಿಗಿಟ್ಟು ಹಿಜಾಬ್ ಗೆ ಅವಕಾಶ ಕೊಟ್ಟಿದ್ದಾರೆ. ಮುಸ್ಲಿಮರ ಪ್ರೀತಿ ಗಳಿಸುವುದಕ್ಕಿಂತ ಹಿಂದೂಗಳ‌ ಉರಿಸುವುದೆ ಕಾಂಗ್ರೆಸ್‌ನ ಅಜೆಂಡಾ ಆಗಿದೆ. ಮೂರು ಕಾಸಿನ ಕೆಲಸ ಮಾಡದ ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಹೀಗಾಗಿ ಇವರಿಗೆಲ್ಲ ಬುರ್ಕಾ ಬೇಕೆ ಬೇಕಿದೆ ಎಂದು ಪ್ರತಾಪ್ ಸಿಂಹ್ ಹೇಳಿದ್ದಾರೆ.

ಸಿದ್ದರಾಮಯ್ಯ ಮಾಡುತ್ತಿರುವುದು ತಾಲಿಬಾನ್ ಸರಕಾರ. ಸಿದ್ದರಾಮಯ್ಯ ಕರ್ನಾಟಕದ ಖಮೇನಿ ಆಗೋಕೆ ಪ್ರಯತ್ನ ಪಡುತ್ತಿದ್ದಾರೆ. ಹಿಂದೂಗಳು ಜಾತಿ ಜಾತಿ ಅಂತಾ ಹೊಡೆದಾಡುವುದು ಬಿಡಿ.ಜಾತಿ ಜಾತಿ ಅಂತಾ ಸಾಯುವುದು ಬಿಡಿ. ಹಿಂದೂಗಳಾಗಿ ಒಗ್ಗೂಡುವ ಕಾಲ ಬಂದಿದೆ.ಸನಾತನ ಧರ್ಮ ನಾಶವನ್ನು ಮಾಡಲು ಸಿದ್ದರಾಮಯ್ಯ ರಂಥವರು ಯತ್ನಿಸಿದ್ದಾರೆ ಎಂದಿದ್ದಾರೆ.

ಜನಿವಾರ, ಶಿವಧಾರ ಒಟ್ಟೆ ಒಳಗೆ ಹಾಕುತ್ತೇವೆ. ಅದನ್ನು ಪ್ರದರ್ಶನ ಮಾಡಲ್ಲ. ಜನಿವಾರ, ಶಿವಧಾರಕ್ಕೆ ಅನುಮತಿ ಕೊಡುವುದಕ್ಕೆ ನೀವು ಯಾವ ದೊಣ್ಣೆ ನಾಯಕ. ಎರಡು ವರ್ಷ ಕಳೆಯಲಿ ಪೀಡೆ ತೊಲಗಿತು ಎಂದು ಕಾಂಗ್ರೆಸ್ ಗೆ ಜನರು ತರ್ಪಣ ಬಿಡುತ್ತಾರೆ. ಶಾಲೆಗಳಿಗೆ ಬುರ್ಕಾವೂ ಬೇಡ ಕೇಸರಿ ಶಾಲು ಬೇಡ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Leave a Reply

Your email address will not be published. Required fields are marked *