ಮಗನಿಗೆ ಟಿಕೆಟ್‌ ಕೊಡದಿದ್ರೆ ರಾಜೀನಾಮೆ! ದಾವಣಗೆರೆಯಲ್ಲಿ ಜಮೀರ್‌ v/s ಎಸ್‌ಎಸ್‌ ಮಲ್ಲಿಕಾರ್ಜುನ್

ಬೆಂಗಳೂರು : ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಸಚಿವರಾದ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹಾಗೂ ಜಮೀರ್‌ ಅಹ್ಮದ್‌ ನಡುವೆ ಭಾರೀ ಲಾಬಿ ನಡೆಯುತ್ತಿದೆ.

ಒಂದು ಕಡೆ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ತಮ್ಮ ಪುತ್ರ ಸಮರ್ಥ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡಬೇಕೆಂದು ಎಸ್‌.ಎಸ್‌.ಮಲ್ಲಿಕಾರ್ಜುನ್ ಪಟ್ಟುಹಿಡಿದಿದ್ದಾರೆ. ಮತ್ತೊಂದೆಡೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಈಗಾಗಲೇ ಸಿದ್ದರಾಮಯ್ಯನವರ ಬಳಿ, ಮುಸ್ಲೀಂ ಸಮುದಾಯದವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮುಸ್ಲೀಂ ಸಮುದಾಯದ ಎಂಎಲ್‌ಎಸಿ ಜಬ್ಬಾರ್‌ ಮನೆಗೆ ಭೇಟಿ ನೀಡಿ ಟಿಕೆಟ್‌ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಕೂಡಾ ಜಿದ್ದಿಗೆ ಬಿದ್ದಿದ್ದು, ತಮ್ಮ ಮಗನಿಗೆ ಟಿಕೆಟ್‌ ನೀಡದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ಯುಗಾದಿ ಬಳಿಕ ಅವರಾಗೇ ಅಧಿಕಾರ ಬಿಟ್ಟು ಕೊಡ್ತಾರೆ : ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ

ಇತ್ತ ಶಾಸಕ ಬಸವರಾಜ್‌ ಶಿವಗಂಗಾ ಸಹ ಜಬ್ಬಾರ್‌ ಪರ ಬ್ಯಾಟ್‌ ಬೀಸಿದ್ದು ಜಬ್ಬಾರ್‌ಗೆ ಟಿಕೆಟ್‌ ಸಿಗಬೇಕು. ನಮ್ಮ ಸಂಪೂರ್ಣ ಬೆಂಬಲ ಅವರಿಗೆ ಇದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಸದ್ಯ ದಾವಣೆಗೆರೆ ರಾಜಕಾರಣದಲ್ಲಿ ಜಮೀರ್‌ ಮಧ್ಯಪ್ರವೇಶದಿಂದ ಮಲ್ಲಿಕಾರ್ಜುನ್‌ ಸಿಟ್ಟಾಗಿದ್ದಾರೆ. ಈಗಾಗಲೇ ಮುಸ್ಲೀಂ ಸಮುದಾಯಗಳು ಪತ್ಯೇಕ ಸಭೆಗಳನ್ನ ನಡೆಸ್ತಿವೆ. ಸದ್ಯ ಸಚಿವರಿಬ್ಬರ ನಡುವೆ ಟಿಕೆಟ್‌ಗಾಗಿ ದೊಡ್ಡಮಟ್ಟದ ಪೈಪೋಟಿ ನಡೆಯುತ್ತಿದ್ದು, ಟಿಕೆಟ್‌ ಯಾರ ಪಾಲಾಗಲಿದೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *