ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಕೊನೆಗೂ ಪೂರ್ಣ ರಾಜಕಾರಣಕ್ಕೆ ಇಳಿದಿದ್ದಾರೆ. ಇಂದು ಪ್ರಜಾಕೀಯ ಪಕ್ಷದ ಹೊಸ ಆಪ್ ಲಾಂಚ್ ಮಾಡಿದ್ದು, ದಿ ರಿಯಲ್ ಪ್ರಜಾಕೀಯ ಎಂದು ಆಪ್ ಲಾಂಚ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ಏಪ್ರಿಲ್ 1ನ್ನ ಮೂರ್ಖರ ದಿನ ಎಂದು ಕರೆಯುವ ಬದಲು ಅದನ್ನ ಬುದ್ದಿವಂತರ ದಿನಎಂದು ಆಚರಿಸಬೇಕು ಎಂದರು.
ನಾವುಗಳು ಇಷ್ಟು ವರ್ಷ ಏಪ್ರಿಲ್ ಫಸ್ಟ್ ಫೂಲ್ಸ್ ಡೇ ಎನ್ನುತ್ತಲೇ ಬಂದೆವು. ಫೂಲ್ಸ್ ಡೇ ಯನ್ನ ಒಂದು ಇಂಟೆಲಿಜೆನ್ಸ್ ಡೇ ಮಾಡೋಣ ಅನ್ನೋ ಯೋಚನೆ ನನ್ನದು. ಫೂಲ್ಸ್ ಡೇಯನ್ನ ವೈಸ್ ಪೀಪಲ್ ಡೇ ಮಾಡೋಣ ಅಂತ ಅಂದುಕೊಂಡೆವು. ಹಾಗಾಗಿ ಇವತ್ತು, ಈ ಆಪ್‌ನ ಲಾಂಚ್ ಮಾಡಿದ್ದೇವೆ. ಏನಂದ್ರೆ, ಏನ್ ಮಾಡಿದ್ರು ಕೂಡ ಕಷ್ಟ ಆಗಿಬಿಟ್ಟಿದೆ. ನೇರವಾಗಿ ಮಾತಾಡಿದ್ರು ಕೂಡ ಲೆಫ್ಟ್, ರೈಟ್ ಅಂತ ಯೋಚನೆ ಮಾಡೋ ತರಹ ಆಗಿಬಿಟ್ಟಿದೆ. ಸ್ವಲ್ಪ ಭಯ ಆಗ್ತಾ ಇದೆ ಮಾತಾಡೋದಕ್ಕೆ. ಯಾಕೆಂದರೆ, ಲೆಫ್ಟ್ ಇರೋನು ಕೂಡ ಡಿಪೆಂಡ್ ಆಗಿರ್ತಾನೆ, ವಾಲಿಕೊಂಡು ಇರ್ತಾನೆ ಇನ್ನೊಬ್ಬರ ಮೇಲೆ. ರೈಟ್ ಇರೋನು ಕೂಡ ಇನ್ನೊಬ್ಬರ ಮೇಲೆ ವಾಲಿಕೊಂಡು ಇರ್ತಾನೆ. ನಾನು ಸ್ಟ್ರೈಟ್ ಆಗಿ ನಿಂತಿದ್ದೇನೆ ಸೆಂಟರ್ ಅಲ್ಲಿ. ಹಾಗಾಗಿ, ಇಂಡಿಪೆಂಡೆಂಟ್ ಆಗಿ ಯೋಚನೆ ಮಾಡ್ತೀನಿ ಅಂತ ಅಂದುಕೊಂಡಿದ್ದೇನೆ. ಈ ಐಡಿಯಾ ಮಾಡಿರೋದು ಕೂಡ ಇಂಡಿಪೆಂಡೆಂಟ್ ಆಗಿ, ಸ್ವತಂತ್ರವಾಗಿ ಯೋಚನೆ ಮಾಡೋರಿಗೆ ಮಾಡಿರೋದು ಇದು ಎಂದರು.
ನಾನು ಬೇರೆಯವರ ಮಾತುಗಳಿಂದ ಸ್ಪೂರ್ತಿ ಕಳೆದುಕೊಳ್ಳುವುದಿಲ್ಲ. ನಾನು ಯಾವುದೇ ಪಕ್ಷ, ನಾಯಕರು, ಅವರ ಮಾತುಗಳಿಂದ, ಭರವಸೆ, ಹಣ, ರ್ಯಾಲಿ, ಸಾಮಾಜಿಕ ಸೇವೆ, ಬ್ಲೇಮ್ ಗೇಮ್, ಪಬ್ಲಿಸಿಟಿ, ಪ್ರತಿಭಟನೆಯಿಂದ ಪ್ರಭಾವಿತವಾಗುವುದಿಲ್ಲ. ಸಂವಿಧಾನದಲ್ಲಿ ಬದಲಾವಣೆ ಆಗುವವರೆಗೆ ನಾನು ಬದಲಾವಣೆಗಾಗಿ ಪ್ರತಿಭಟಿಸುತ್ತೇನೆ. ನನಗೊಬ್ಬ ಕೆಲಸಗಾರ ಬೇಕು, ನನ್ನ ಬೇಡಿಕೆಗಳಿಗೆ ಅನುಸಾರವಾಗಿ ಕೆಲಸ ಮಾಡುವವನು ಬೇಕು ಎಂದು ಬರೆಯಲಾಗಿದೆ. ಆ ನಂತರ ಪ್ರಜಾಕೀಯ ರಿಜಿಸ್ಟ್ರೇಷನ್ ಪೇಜ್ ತೆರೆದುಕೊಂಡು ಅಲ್ಲಿ ನಮೂದಿಸುವ ಆಯ್ಕೆ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ : ಬೂಟ್ ನೆಕ್ಕುವವರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶವೇ? ನನ್ನ ರಾಜಕೀಯ ತ್ಯಾಗಕ್ಕೆ ಬೆಲೆಯೇ ಇಲ್ವಾ : BSY ಗೆ ಎಸ್.ಟಿ.ಸೋಮಶೇಖರ್ ಪ್ರಶ್ನೆ
ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಅನ್ನೋರು ಮಾತ್ರ ನಮ್ಮ ಪಾರ್ಟಿ ಒಳಗೆ ಬರಬೇಕು ಅನ್ನೋದು ನಮ್ಮ ಉದ್ದೇಶ. ಸದ್ಯಕ್ಕೆ ಮುನಿಸಿಪಲ್ ಎಲೆಕ್ಷನ್ ಬಗ್ಗೆ ಮಾಡೆಲ್ ರೆಡಿ ಮಾಡಿಕೊಂಡಿದ್ದೇವೆ. ವಾರ್ಡ್ ವೈಸ್ ಹೋದರೆ ಏರಿಯಾದ ಪ್ರತಿ ಸಮಸ್ಯೆಗಳನ್ನು ಇಲ್ಲಿ ರೈಸ್ ಮಾಡಬಹುದು. ಅದಕ್ಕೆ ಪರಿಹಾರ ಕೂಡ ಚಾರ್ಟ್ ಮೂಲಕವೇ ತಿಳಿಸಿದ್ದೇವೆ ಎಂದಿದ್ದಾರೆ.
ವರ್ಕ್ ಹೇಗೆ ಮಾಡಬೇಕು ಅನ್ನೋದನ್ನ ಸ್ಪರ್ಧಿಗಳಲ್ಲಿ ಹೇಳಿ ಸೈನ್ ಮಾಡಿಸಿರುತ್ತೇವೆ. ಜನರ ಸಮಸ್ಯೆ ಕ್ಲೀಯರ್ ಮಾಡಲಿಕ್ಕೆ ಹೇಗೆ ಮಾಡಬೇಕು ಅನ್ನೋದು ಇದರಲ್ಲಿ ಗೊತ್ತಾಗುತ್ತೆ. ಈ ಚಾರ್ಟ್ನಲ್ಲಿ ಜನರ ಅಭಿಪ್ರಾಯ ತಿಳಿಸಲು ಅವಕಾಶ ಕೊಟ್ಟಿರುತ್ತೇವೆ. ಜನ ಅತೀ ಹೆಚ್ಚು ಯಾವುದು ಸರಿ ಅಂತಾರೋ ಅದಕ್ಕೆ ಪ್ರಾಮುಖ್ಯತೆ ಕೊಡತ್ತೇವೆ ಎಂದಿದ್ದಾರೆ.
ನಾನು ಎಲೆಕ್ಷನ್ ನಿಲ್ತೀನೋ ಇಲ್ಲವೋ ಮುಂದೆ ನೋಡ್ತೀನಿ.. ಆದರೆ ಮೊದಲು ಜನಕ್ಕೆ ಅವಕಾಶ ಕೊಡಬೇಕು. ನಮ್ಮ ಪಕ್ಷದಿಂದ ಏನನ್ನೂ ನಿರೀಕ್ಷೆ ಮಾಡಬೇಡಿ.. ಇದು ಆಪ್ ಬಿಜೆಪಿ ಪಕ್ಷ ಅಲ್ಲ. ಇದು ಪ್ರಜಾಕೀಯ ಪಕ್ಷ ಎಂದಿದ್ದಾರೆ.