ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಫಂಡಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಎಸ್ಡಿಪಿಐ ಅಭ್ಯರ್ಥಿಗೆ ಸಚಿವ ಜಮೀರ್ ಅಹ್ಮದ್ ಫಂಡಿಂಗ್ ಮಾಡಿದ್ದಾರೆ ಎನಿಸುವುದಿಲ್ಲ, ಚುನಾವಣೆಯಲ್ಲಿ ಅವರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ
ಇದನ್ನೂ ಓದಿ : ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ನಲ್ಲಿ SDPI ಅಭ್ಯರ್ಥಿಗೆ ಜಮೀರ್ ಟೀಂನಿಂದ ₹10 ಕೋಟಿ ನೆರವು, ಹೈಕಮಾಂಡ್ಗೆ ದೂರು..!
ಸಚಿವ ಜಮೀರ್ ಅಹ್ಮದ್ ದಾವಣಗೆರೆಗೆ ಬಂದು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರು ಆ ರೀತಿ ಮಾಡುವ ವ್ಯಕ್ತಿಯಲ್ಲ. ನನಗೆ ಅವರ ಮೇಲೆ ನಂಬಿಕೆ ಇದೆ. ಅವರು ಎಸ್ಡಿಪಿಐ ಅಭ್ಯರ್ಥಿಗೆ ಫಂಡಿಂಗ್ ಮಾಡಿದ್ದಾರೆ ಎಂದು ಅನಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆಗೆ ನಿಲ್ಲುವುದೇ ಗೆಲ್ಲುವುದಕ್ಕೆ. ಯಾರಾದರೂ ಸೋಲುತ್ತೇವೆ ಎಂದು ಹೇಳುತ್ತಾರಾ? ಆದರೆ ಕ್ಷೇತ್ರದ ಜನರ ದೃಷ್ಟಿಯಲ್ಲಿ ನಮ್ಮ ಮನೆತನ ಮತ್ತು ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಲ್ಪಸಂಖ್ಯಾತರಲ್ಲಿ ಅಸಮಾಧಾನವಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ತೀರ್ಮಾನಿಸಿಯೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೆವು ಎಂದು ಹೇಳಿದ್ದಾರೆ.