ಸಿದ್ದರಾಮಯ್ಯಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ : ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮೈಸೂರು : ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಆಪ್ತರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ನೀಡುತ್ತಿರುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿವೆ.

ಸಿದ್ದರಾಮಯ್ಯ ಅವರಿಂದ ಇಂಥಾ ಅಸಹಾಯಕತೆಯನ್ನ ನಿರೀಕ್ಷೆ ಮಾಡಿರಲಿಲ್ಲ. ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ, ಧ್ವನಿ ಕುಗ್ಗಿದಾಗ ಅಸಹಾಯಕತೆ ಆಗುತ್ತದೆ ಎಂದು ಮೊನ್ನೆ ಅಷ್ಟೇ ರಾಜಣ್ಣ ಶಾಕಿಂಗ್ ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ. ಹೀಗೆ ಸಿದ್ದರಾಮಯ್ಯ ಮೌನದ ಬಗ್ಗೆ ನಾನಾ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಇತ್ತ ಸತೀಶ್ ಜಾರಿಹೊಳಿ ಸಹ ಸಿಎಂಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ನಾನು ಒಬ್ಬ ಒಳ್ಳೆಯ ಮಗ ಆಗಿಲ್ಲ, ಯಾವಾಗಲೂ ನನ್ನ ತಂದೆ ತಾಯಿಗೆ ನನ್ನಿಂದ ಕೆಟ್ಟದ್ದೇ ಆಗಿದೆ : ನಲಪಾಡ್

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಈಗ ಅವರಿಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ. ಎಲ್ಲಾ ಸಮಯದಲ್ಲೂ ಒಂದೇ ರೀತಿ ರಾಜಕಾರಣ ಮಾಡಲಾಗಲ್ಲ. ಕಾಂಪ್ರಾಮೈಸ್ ಅನಿವಾರ್ಯ ಎಂದು ಹೇಳಿದ್ದಾರೆ.

ಸಿಎಂ ಅತ್ಯಾಪ್ತ ಬಳಗದಲ್ಲಿ‌ ಗುರುತಿಸಿಕೊಂಡಿರುವ ಈ ಇಬ್ಬರ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಇದೀಗ ಸಂಚಲನ‌ ಮೂಡಿಸಿವೆ.

Leave a Reply

Your email address will not be published. Required fields are marked *