ಬಿಹಾರ : ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಮೋದಿ ನಿತೀಶ್ ಕುಮಾರ್ ನೇತೃತ್ವದಲ್ಲಿ NDA ಮೈತ್ರಿಕೂಟ ದ್ವಿಶತಕ ಬಾರಿಸಿದೆ. ಇತ್ತ ರಾಹುಲ್ ಗಾಂಧಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ಮಹಾಘಟ ಬಂದನ್ 40 ರ ಗಡಿಯನ್ನೂ ದಾಟಿಲ್ಲ.
ಇದೀಗ ಮಹಾ ಮೈತ್ರಿಕೂಟ ಹೀನಾಯ ಸೋಲಿನ ಬಗ್ಗೆ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಫಲಿತಾಂಶಗಳನ್ನು ಆಘಾತಕಾರಿ ಎಂದು ಬಣ್ಣಿಸಿದ್ದಾರೆ.
ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಮಹಾಮೈತ್ರಿಕೂಟದಲ್ಲಿ ನಂಬಿಕೆ ಇಟ್ಟ ಬಿಹಾರದ ಲಕ್ಷಾಂತರ ಮತದಾರರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬಿಹಾರದಲ್ಲಿನ ಈ ಫಲಿತಾಂಶ ನಿಜಕ್ಕೂ ಆಘಾತಕಾರಿ.
ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ ಈ ಹೋರಾಟ. ಕಾಂಗ್ರೆಸ್ ಪಕ್ಷ ಮತ್ತು ಇಂಡಿ ಮೈತ್ರಿಕೂಟವು ಈ ಫಲಿತಾಂಶವನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮ್ಮ ಪ್ರಯತ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಚುನಾವಣಾ ಫಲಿತಾಂಶಗಳು ಎನ್‌ಡಿಎ 202 ಸ್ಥಾನಗಳಲ್ಲಿ ತೋರಿಸುತ್ತದೆ. ಆದರೆ ಮಹಾ ಮೈತ್ರಿಕೂಟ ಕೇವಲ 35 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಈ ಬಾರಿ ಜನ್ಸುರಾಜ್ ತನ್ನ ಖಾತೆಯನ್ನು ತೆರೆಯಲು ಸಹ ವಿಫಲವಾಗಿದೆ. ಆದರೆ ಇತರ ಅಭ್ಯರ್ಥಿಗಳು ಆರು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರು.
ಬಿಜೆಪಿ ಎನ್‌ಡಿಎಯಲ್ಲಿ 87 ಸ್ಥಾನಗಳನ್ನು ಗೆದ್ದು ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮಧ್ಯೆ, ಜೆಡಿಯು ಇದುವರೆಗೆ 78 ಸ್ಥಾನಗಳನ್ನು ಗೆದ್ದಿದ್ದು, ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾಮೈತ್ರಿಕೂಟದೊಳಗೆ, ಆರ್‌ಜೆಡಿ 24 ಸ್ಥಾನಗಳನ್ನು ಗೆದ್ದಿದ್ದು, ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದಿದೆ.