ಆಪರೇಷನ್ ಸಿಂಧೂರ ನಿಲ್ಲಿಸದಿದ್ರೆ ಪಾಕಿಸ್ತಾನದ ಪ್ರಧಾನಿ ಸತ್ತು ಹೋಗುತ್ತಿದ್ದರು : ಟ್ರಂಪ್ ಹೊಸ ಹೇಳಿಕೆ

ನವದೆಹಲಿ : ಭಾರತ-ಪಾಕ್‌ ಸಂಘರ್ಷವು ತನ್ನಿಂದಲೇ ನಿಂತದ್ದು ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಆಪರೇಷನ್‌ ಸಿಂಧೂರದ ದಾಳಿ ನಿಲ್ಲಿಸದೇ ಇದ್ದಿದ್ದರೆ ಪಾಕಿಸ್ತಾನದ ಪ್ರಧಾನಮಂತ್ರಿಗಳು ಸತ್ತುಹೋಗುತ್ತಿದ್ದರು ಎಂದು 3.5 ಕೋಟಿ ಜನ ಹೇಳಿದರು ಎಂದು ಹೊಸ ಹೇಳಿಕೆ ನೀಡಿದ್ದಾರೆ.

ಈ ಮೂಲಕ, ತಮಗೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ರ ಜೀವ ಉಳಿಸಿದ ಶ್ರೇಯವನ್ನು ತಾವೇ ಕೊಟ್ಟುಕೊಂಡಿದ್ದಾರೆ. ಅಮೆರಿಕದ ಸಂಸತ್ತಿನಲ್ಲಿ ವಾರ್ಷಿಕ ಜಂಟಿ ಅಧಿವೇಶನದಲ್ಲಿ 100 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ಟ್ರಂಪ್, ನಾನು ಅಧಿಕಾರಕ್ಕೇರಿದ 10 ತಿಂಗಳಲ್ಲಿ 8 ಯುದ್ಧ ನಿಲ್ಲಿಸಿದೆ. ಅದರಲ್ಲಿ ಭಾರತ-ಪಾಕ್‌ ಸಮರ ಕೂಡ ಒಂದು. ನಾನು ಆ ಯುದ್ಧ ನಿಲ್ಲಿಸದೇ ಇದ್ದಿದ್ರೆ ಅದು ಅಣುದಾಳಿಯ ಹಂತಕ್ಕೂ ಹೋಗುವ ಸಂಭವವಿತ್ತು. ಒಂದೊಮ್ಮೆ ನಾನು ಹಸ್ತಕ್ಷೇಪ ಮಾಡದೇ ಇದ್ದಿದ್ದರೆ ಪಾಕ್‌ ಪ್ರಧಾನಿ ಸಾಯುತ್ತಿದ್ದರು ಎಂದ 3. 5 ಕೋಟಿ ಜನ ಹೇಳಿದರು’ ಎಂದು ನುಡಿದರು. ಅದಕ್ಕಾಗಿ ನಾನು ಯುದ್ಧ ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಧಾರವಾಡದಲ್ಲಿ ಉಗ್ರ ಪ್ರತಿಭಟನೆ ಬೆನ್ನಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಟ್ರಂಪ್‌ 100ಕ್ಕೂ ಅಧಿಕ ಬಾರಿ, ಪೆಹಲ್ಗಾಂ ದಾಳಿಗೆ ಪ್ರತಿಯಾಗಿ ಪಾಕ್‌ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂಧೂರ ನಿಲ್ಲಿಸಿದ್ದು ತಾವೇ ಎಂದು ಘೋಷಿಸಿಕೊಳ್ಳುತ್ತಿದ್ದರೂ, ಭಾರತ ಮಾತ್ರ ಆ ವಿಷಯದಲ್ಲಿ 3ನೇ ವ್ಯಕ್ತಿ ಅಥವಾ ರಾಷ್ಟ್ರದ ಮಧ್ಯಪ್ರವೇಶವೇ ಆಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದೆ.

Leave a Reply

Your email address will not be published. Required fields are marked *