‘ಆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಮುಂದೆ ಬಚ್ಚಾ, 2013ರಲ್ಲಿ ಹುಲಿಯಾ, ಈಗ ಇಲಿಯಾ’

ಮೈಸೂರು : ಆ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಮುಂದೆ ಬಚ್ಚಾ ಆದ್ರೆ, ದೆಹಲಿಯಲ್ಲಿ ಅವರ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ಕಾಯ್ತಾ ಇರೋದು ನೋಡಿದ್ರೆ ಬೇಜಾರಾಗುತ್ತೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದೆ ಕಾಯಬೇಕಾದ ಪರಿಸ್ಥಿತಿ ಬಂದಿರುವುದು ಕನ್ನಡಿಗನಾಗಿ, ಮೈಸೂರಿನವನಾಗಿ ನನಗೆ ಬೇಸರ ತರಿಸಿದೆ. ಸಿದ್ದರಾಮಯ್ಯನವರಿಗೆ ಈ ದೈನೇಸಿ ಸ್ಥಿತಿ ಬರಬಾರದಿತ್ತು. ಅವರ ಸ್ಥಿತಿ ನೋಡೋಕಾಗ್ತಿಲ್ಲ.

2013ರಲ್ಲಿ ಸಿದ್ದರಾಮಯ್ಯ ಹುಲಿಯಾಗಿದ್ದರು. ಈಗ ಇಲಿಯಾಗಿದ್ದಾರೆ. ಹಿಂದೆ ಇಂದಿರಾಗಾಂಧಿ, ಸೋನಿಯಾ ಗಾಂಧಿಯವರನ್ನೇ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಇಂದು ಅವರ ಮೊಮ್ಮಗನ ಪಾದಪೂಜೆ ಮಾಡಲು ಸಿದ್ಧವಾಗಿರುವುದು ನೋವಿನ ಸಂಗತಿ. ಸಿದ್ದರಾಮಯ್ಯನವರ ಮುಂದೆ ರಾಹುಲ್ ಗಾಂಧಿ ಒಬ್ಬ ಬಚ್ಚಾ. ಅಂಥವನ ಭೇಟಿಗಾಗಿ ಗೇಟ್‌ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಮುಸ್ಲಿಮರ ಸಮಸ್ಯೆ ಬಡತನವಲ್ಲ, ಅವರೊಳಗಿನ ಧರ್ಮಾಂಧತೆ..!

ಬಳಿಕ ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಮಾತನಾಡಿ, ವಿದ್ಯಾವಂತ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿರುವುದು ಅತ್ಯಂತ ಅಪಾಯಕಾರಿ. ಮುಸ್ಲಿಮರ ಸಮಸ್ಯೆ ಬಡತನವಲ್ಲ, ಅವರೊಳಗಿನ ಧರ್ಮಾಂಧತೆಯೇ ನಿಜವಾದ ಸಮಸ್ಯೆ. ಪುರುಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸವಾಗಿದೆ. ಟಾಂಗಾ ಸಾಬಿ, ಜಟ್ಕಾ ಸಾಬಿಗಿಂತ ವಿದ್ಯಾವಂತ ಮುಸ್ಲಿಮರ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾದರೆ ಅವರನ್ನು ಪತ್ತೆಹಚ್ಚುವುದು ಹೇಗೆ? ಎಂದು ಕಿಡಿಕಾರಿದರು.

ಇದನ್ನೂ ಓದಿ : ಪರಪ್ಪನ ಅಗ್ರಹಾರದಲ್ಲಿ ಮೊಬೈಲ್​ ಬಳಸ್ತಿದ್ದ ಉಗ್ರನಿಗೂ ದೆಹಲಿ ಕಾರು ಸ್ಫೋಟಕ್ಕೂ ಲಿಂಕ್​: R.ಅಶೊಕ್‌ ಅನುಮಾನ

ಇನ್ನು ಭಾರತವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದನ್ನು ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದ್ದಾರೆಯೇ> ಸಿದ್ದರಾಮಯ್ಯನವರಂತಹ ನಾಯಕರು ಇರುವಾಗ ನಾವು ದೇಶದೊಳಗೆ ಇಂತಹ ಪರಿಸ್ಥಿತಿಯನ್ನು ಎದುರಿಸಲೇಬೇಕು. ಅವರ ಸರ್ಕಾರದ ಯೋಗ್ಯತೆಗೆ ಜೈಲಿನಲ್ಲಿರುವ ಭಯೋತ್ಪಾದಕನನ್ನೇ ಬಿಗಿಯಾಗಿ ಇಡಲು ಆಗುತ್ತಿಲ್ಲ. ಇನ್ನು ಇವರೇನು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವುದು.

ಯುಪಿಎ ಸರ್ಕಾರದ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟಗಳಾಗಿದ್ದವು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದೊಳಗೆ ನಡೆದ ಮೊದಲ ದೊಡ್ಡ ಸ್ಫೋಟವಿದು. ಮೊದಲು ಪಾಕಿಸ್ತಾನದಿಂದ ಬಂದು ಬಾಂಬ್ ಇಡುತ್ತಿದ್ದರು. ಈಗ ನಮ್ಮ ದೇಶದೊಳಗಿನ ಮುಲ್ಲಾಗಳೇ ಇದಕ್ಕೆ ತಯಾರಾಗುತ್ತಿದ್ದಾರೆ. ದೇಶದ ಒಳಗಿನವರೇ ಬಾಂಬ್ ಇಡಲು ಮುಂದಾದರೆ ಮೋದಿ ತಡೆಯಲು ಸಾಧ್ಯವೇ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Leave a Reply

Your email address will not be published. Required fields are marked *