ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲೂ ನೋಡೇ ಇಲ್ಲ : ಸಂತೋಷ್ ಲಾಡ್

ಹುಬ್ಬಳ್ಳಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆದ್ದಿದೆ. ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲೂ ನೋಡೇ ಇಲ್ಲ ಎಂದು ಸಚಿವ ಸಂತೋಷ ಲಾಡ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನು ನಾನು ಎಲ್ಲೂ ನೋಡೇ ಇಲ್ಲ, ದೇಶದಲ್ಲಿ ಬಾಂಬ್‌ ಬ್ಲಾಸ್ಟ್ ಆದಾಗ ಪ್ರಧಾನಿ ಭೂತಾನ್ ರಾಜನ ಹುಟ್ಟುಹಬ್ಬವನ್ನು ಆಚರಣೆ ಮಾಡ್ತಿದ್ರು. ದೆಹಲಿ ಸ್ಫೋಟ ಆದಾಗ ಪ್ರಧಾನಿ ವಾಪಾಸ್ ಬರಬಹುದಿತ್ತು ಆದರೆ ವಾಪಾಸ್ ಬರದೇ ಭೂತಾನ್ ಪ್ರಧಾನಿ ಹುಟ್ಟುಹಬ್ಬವೇ ಮುಖ್ಯವಾಗಿತ್ತು ಎಂದರು.

ಇನ್ನು ಇಡೀ ದೇಶದಲ್ಲಿ ಬಡವನಿಗೆ ಭೂಮಿ ಕೊಟ್ಟದ್ದು ಇಂದಿರಾಗಾಂಧಿ ಕೊಡುಗೆ. ಪಾಕಿಸ್ತಾನ ವಿಭಾಗ ಮಾಡಿ ಬಾಂಗ್ಲಾದೇಶ ಮಾಡಿದ್ದು ಇಂದಿರಾಗಾಂಧಿ, ಅವರನ್ನು ಅಟಲ್ ಬಿಹಾರಿ ವಾಜಪೇಯಿ ಐರನ್ ಲೇಡಿ ಎಂದು ಕರೆದಿದ್ದಾರೆ. ಅಂತವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅಧಿಕಾರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ. ಐದು ಪ್ರಮುಖ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ. ಏನು ಆಗುತ್ತದೋ ಕಾದು ನೋಡೋಣ ಎಂದರು. ಇದೇ ವೇಳೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಆಗಬೇಕು. ಆದಷ್ಟು ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡಿಕೊಳ್ಳಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *