ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಸಿದ್ದರಾಮಯ್ಯರ ಉತ್ತರಾಧಿಕಾರಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಈ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಫುಲ್ಸ್ಟಾಪ್ ಇಡಲು ಮುಂದಾಗಿದ್ದಾರೆ.
ನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವರು ಹೇಳಿದ್ದ ಹೇಳಿಕೆಯ ಬಗ್ಗೆ ಯತೀಂದ್ರ ಬಳಿಯೇ ಕೇಳಿದೆ. ಅದು ಸೈದ್ಧಾಂತಿಕವಾಗಿ ಮಾತ್ರ ಅಂತ ಹೇಳಿದ್ದಾರೆ. ಇಂಥವರೇ ಸಿಎಂ ಆಗಬೇಕು ಎಂದು ಡಾ.ಯತೀಂದ್ರ ಹೇಳಿಲ್ಲ. ತಿರುಚಿ ಏನಾದ್ರೂ ಹೇಳಿದ್ದಾರಾ ಎಂದು ಡಾ.ಯತೀಂದ್ರಗೆ ಕೇಳಿದೆ. ಇಲ್ಲ, ನಾನು ಸೈದ್ಧಾಂತಿಕವಾಗಿ ಮಾತಾಡಿದ್ದು ಎಂದಿದ್ದಾರೆ ಎಂದರು.
ಯತೀಂದ್ರ ಮಾತನಾಡಿರುವ ವಿಷಯ ಅಷ್ಟು ಸುದ್ದಿಯಾದಾಗ ನಾನೇ ಅವನ ಬಳಿ ನೀನು ಏನು ಮಾತನಾಡಿದ್ದೀಯಾ ಎಂದು ಕೇಳಿದೆ, ಅದಕ್ಕೆ ಅವನು ಸೈದ್ಧಾಂತಿಕವಾಗಿ ಮಾತನಾಡಿದ್ದೀನಿ ಎಂದ. ಇಂಥವರೇ ಮುಂದೆ ಮುಖ್ಯಮಂತ್ರಿಯಾಗಬೇಕೆಂದು ಹೇಳಿಲ್ಲ ಎಂದರು. ಅವರು ಆ ಮಾತುಗಳನ್ನು ಏಕೆ ಹೇಳಬೇಕಾಗಿತ್ತು ಎಂದದ್ದಕ್ಕೆ ಈಗ ನೀವು ಕೇಳಿದ್ದೀರಲ್ಲ, ನೀವು ಸುಮ್ನಿರಲ್ಲ, ಏನೋ ಪ್ರಶ್ನೆ ಕೇಳುತ್ತೀರಿ, ಹಾಗೆ ಅಲ್ಲಿ ಕೂಡ ಯಾರೋ ಏನೋ ಪ್ರಶ್ನೆ ಕೇಳಿರಬೇಕು, ಅದಕ್ಕೆ ಉತ್ತರ ಯತೀಂದ್ರ ಉತ್ತರ ನೀಡಿರಬೇಕು ಎಂದರು. ಇಲ್ಲಿ ನಾವು ಸಹಕಾರ ಸಪ್ತಾಹದ ಬಗ್ಗೆ ಮಾತನಾಡಲು ಬಂದಿರುವುದು ನೀವು ಈ ಪ್ರಶ್ನೆ ಕೇಳಿದ್ದೀರಿ ಹಾಗೆಯೇ ಅಲ್ಲಿ ಕೂಡ ಯಾರೋ ಏನೋ ಪ್ರಶ್ನೆ ಕೇಳಿರಬೇಕು ಎಂದರು.