ದೊರೆ ಮಾಡಿದ್ದಕ್ಕೆ ದಂಡ ಇಲ್ಲ; ರಾಹುಲ್ ಗಾಂಧಿ ವಿರುದ್ಧ ರಾಜಣ್ಣ ಅಸಮಾಧಾನ

ತುಮಕೂರು : ದಾವಣಗೆರೆ – ಬಾಗಲಕೋಟೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್ ನಾಯಕ‌ ರಾಹುಲ್‌ ಗಾಂಧಿ ವಿರುದ್ಧ ಅಸಮಾಧಾನ‌ ಹೊರಹಾಕಿದ್ದಾರೆ.

ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಈ ಹಿಂದೆ ಸದ್ಗುರು, ರಾಹುಲ್ ಗಾಂಧಿ ಯಾರು, ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದೀಗ ರಾಹುಲ್​ ಗಾಂಧಿಯೇ ಸದ್ಗುರು ಜೊತೆ ಹೋಗಿ ಕುಳಿತುಕೊಳ್ಳುತ್ತಾರೆ. ಇದು ಶಿಸ್ತು ಮೀರಿದಂತೆ ಅಲ್ವಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ದೊರೆ ಮಾಡಿದ್ದಕ್ಕೆ ದಂಡ ಇಲ್ಲ ಅನ್ನೋ ಗಾದೆ ಮಾತಿದೆ. ಹಾಗೆಯೇ ನಡೆಯುತ್ತಿದೆ ಎನ್ನುವ ಮೂಲಕ ಕೆಎನ್​ ರಾಜಣ್ಣ ಕಾಂಗ್ರೆಸ್ ಶಿಸ್ತು ಕ್ರಮದ ವಿರುದ್ಧ ಅಸಮಾಧಾನ ಹೊರಹಾಕಿದರು.

ನಾನು ಪಕ್ಷಕ್ಕಾಗಿ ದುಡಿಯುವವನು, ನಾನು ಯಾವತ್ತು ಅಧಿಕಾರ ಹುಡುಕಿಕೊಂಡು‌ ಹೋದವನಲ್ಲ. ಅಧಿಕಾರ ಸಿಕ್ಕರೆ ಸ್ವೀಕರಿಸುತ್ತೇನೆ. ಅಧಿಕಾರದ ಲಾಭ ಬಡಜನರಿಗೆ ತಲುಪಿಸುತ್ತೇನೆ. ಅದನ್ನ ಸ್ವಂತಕ್ಕೆ ಬಳಸಿಕೊಳ್ಳಲ್ಲ ಎಂದು ರಾಜಣ್ಣ ಹೇಳಿದ್ದಾರೆ.

Leave a Reply

Your email address will not be published. Required fields are marked *