ತುಮಕೂರು : ದಾವಣಗೆರೆ – ಬಾಗಲಕೋಟೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಈ ಹಿಂದೆ ಸದ್ಗುರು, ರಾಹುಲ್ ಗಾಂಧಿ ಯಾರು, ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದೀಗ ರಾಹುಲ್ ಗಾಂಧಿಯೇ ಸದ್ಗುರು ಜೊತೆ ಹೋಗಿ ಕುಳಿತುಕೊಳ್ಳುತ್ತಾರೆ. ಇದು ಶಿಸ್ತು ಮೀರಿದಂತೆ ಅಲ್ವಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ದೊರೆ ಮಾಡಿದ್ದಕ್ಕೆ ದಂಡ ಇಲ್ಲ ಅನ್ನೋ ಗಾದೆ ಮಾತಿದೆ. ಹಾಗೆಯೇ ನಡೆಯುತ್ತಿದೆ ಎನ್ನುವ ಮೂಲಕ ಕೆಎನ್ ರಾಜಣ್ಣ ಕಾಂಗ್ರೆಸ್ ಶಿಸ್ತು ಕ್ರಮದ ವಿರುದ್ಧ ಅಸಮಾಧಾನ ಹೊರಹಾಕಿದರು.
ನಾನು ಪಕ್ಷಕ್ಕಾಗಿ ದುಡಿಯುವವನು, ನಾನು ಯಾವತ್ತು ಅಧಿಕಾರ ಹುಡುಕಿಕೊಂಡು ಹೋದವನಲ್ಲ. ಅಧಿಕಾರ ಸಿಕ್ಕರೆ ಸ್ವೀಕರಿಸುತ್ತೇನೆ. ಅಧಿಕಾರದ ಲಾಭ ಬಡಜನರಿಗೆ ತಲುಪಿಸುತ್ತೇನೆ. ಅದನ್ನ ಸ್ವಂತಕ್ಕೆ ಬಳಸಿಕೊಳ್ಳಲ್ಲ ಎಂದು ರಾಜಣ್ಣ ಹೇಳಿದ್ದಾರೆ.