ಬೆಂಗಳೂರು : ರಾಜ್ಯದಲ್ಲಿ ಅಂತಿಮ ಘಟ್ಟ ತಲುಪಿರುವ ಸಿಎಂ ಬದಲಾವಣೆ ಚರ್ಚೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತ 5 ವರ್ಷ ನಾನೇ ಸಿಎಂ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯಗೆ ನಯವಾಗೇ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವೇ ಸಿಎಂ ಎಂದು ಹೇಳಿದ್ದಾರೆ. ದೊಡ್ಡವರು ಹಾಗೇ ಹೇಳಿದ ಮೇಲೆ ಚಿಕ್ಕವರಾದ ನಾವು ನಮ್ರತೆಯಿಂದ ಇರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮನಯ್ಯನವರೇ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಏನು ಹೇಳಿದ್ದಾರೋ ಅದಕ್ಕೆ ನಾವು ಬದ್ದ, ಹೈಕಮಾಂಡ್ ಏನು ಹೇಳುತ್ತೋ ಬದ್ದ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯನವೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ. ಅವರ ಅಥಾರಿಟಿಯನ್ನು ನಾವು ಯಾವತ್ತೂ ಪ್ರಶ್ನೆ ಮಾಡಲ್ಲ. ರಿಶಫಲ್ ಮಾಡಬೇಡಿ ಎಂದು ನಾವು ಹೇಳಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ದೊಡ್ಡವರು ಹಾಗೇ ಹೇಳಿದ ಬಳಿಕ ಚಿಕ್ಕವರಾದ ನಾವು ನಮತ್ರೆಯಿಂದ ಇರಬೇಕು ಎಂದಿದ್ದಾರೆ.
ಸಿಎಂ ಖರ್ಗೆ ಭೇಟಿ ಮಾಡಿದರೆ ತಪ್ಪೇನಿದೆ?
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರೆ ತಪ್ಪೇನಿದೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ನನಗೂ ಗೊಂದಲ ಇಲ್ಲ, ಸಿಎಂ ಅವರಿಗೂ ಗೊಂದಲ ಇಲ್ಲ ಎಂದರು.
ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದೇನೆ. ಅವಶ್ಯಕತೆ ಇದ್ದರೆ, ಖಂಡಿತ ಭೇಟಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಯಾವಾಗೆಲ್ಲ ಹಿರಿಯರ ಸಲಹೆ, ಮಾರ್ಗದರ್ಶನ ಅಗತ್ಯ ಇದೆಯೋ ಆವಾಗೆಲ್ಲ ಖಂಡಿತ ಭೇಟಿ ಮಾಡುತ್ತೇನೆ. ಸುಮ್ನೆ ಊಹಾಪೋಹಾ ಮಾಡಬೇಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.