ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕದನಕ್ಕೆ ಸದ್ಯಕ್ಕೇನೋ ತಾತ್ಕಾಲಿಕ ವಿರಾಮ ಬಿದ್ದಿದೆ. ಅದ್ರೆ ಹೈಕಮಾಂಡ್ ಏನು ಎಂಬುದನ್ನ ಕಾದುನೋಡ ಬೇಕಿದೆ. ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಅತಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇಂದು ಕುಮಾರಸ್ವಾಮಿ ಅದನ್ನು ಮರೆತಿರಬಹುದು, ಆದರೆ ನಾನು ಮರೆತಿಲ್ಲ ಎಂದರು. ಕುಮಾರಸ್ವಾಮಿ ಅವಧಿಯಲ್ಲಿ ಸರ್ಕಾರವನ್ನು ಕೊನೆಯ ಕ್ಷಣದವರೆಗೆ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನು ಮಾಡಿದ್ದೆ, ಅದು ಅವರ ತಂದೆಗೂ ತಿಳಿದಿದೆ. ನಾನು ಬೆನ್ನ ಹಿಂದಿನಿಂದ ಚೂರಿ ಹಾಕುವ ಮನುಷ್ಯನಲ್ಲ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ಇನ್ನು ದೇವಾಲಯ, ಮಸೀದಿ, ಚರ್ಚ್ ಹಾಗೂ ಜೈನ ಬಸದಿಗಳಿಗೆ ನಾನು ಭೇಟಿ ನೀಡುತ್ತಾ ಇರುತ್ತೇನೆ, ಅಲ್ಲಿಗೆ ಭೇಟಿ ನೀಡುವುದರಿಂದ ಮನಶಾಂತಿ ಸಿಗುತ್ತದೆ, ಪ್ರತಿದಿನವೂ ನಾನು ಪೂಜೆ ಮಾಡಿದ ನಂತರವೇ ಹೊರಗೆ ಬರುವುದು, ಹೀಗೆ ದೇವಸ್ಥಾನಕ್ಕೆ ಹೋಗಿದ್ದರಲ್ಲಿ ತಪ್ಪೇನಿದೆ? ಅದನ್ನು ಟೆಂಪಲ್ ರನ್ ಎನ್ನುವುದಾ? ಎಂದು ಪ್ರಶ್ನಿಸಿದರು.
ಇನ್ನು ಸಿದ್ದರಾಮಯ್ಯ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಅಲ್ಲದೇ ನಾನು ಗುಂಪು ಮಾಡುವಂತಹ ವ್ಯಕ್ತಿಯಲ್ಲ. ದೆಹಲಿಗೆ ಹೋಗಬೇಕಾದರೂ ಸಹ ಯಾವೊಬ್ಬ ಶಾಸಕನನ್ನೂ ಸಹ ಜೊತೆಗೆ ಕರೆದುಕೊಂಡ ಹೋಗುವುದಿಲ್ಲ. ಯಾವತ್ತಾದರೂ ಗುಂಪು ಕಟ್ಟಿಕೊಂಡು ದೆಹಲಿ ಪ್ರವಾಸ ಮಾಡಿದ್ದನ್ನು ಕಂಡಿದ್ದೀರಾ? ಎಂದು ಗರಂ ಆಗೇ ಪ್ರಶ್ನಿಸಿದ್ರು.