ಬೆಂಗಳೂರು ಗ್ರಾಮಾಂತರ : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಕ್ಲೈಮೆಕ್ಸ್ ಹಂತ ತಲುಪಿದೆ. ಈ ಬೆನ್ನಲ್ಲೇ ಇದೀಗ ಕೋಡಿಮಠ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಡಿಮಠ ಶ್ರೀಗಳು ರಾಜ್ಯ ರಾಜಕಾರಣದ ಕುರಿತು ಮಾರ್ಮಿಕ ಭವಿಷ್ಯ ನುಡಿದಿದ್ದಾರೆ.
ಯುಗಾದಿ ನಂತರ ಸಿದ್ದರಾಮಯ್ಯ ಅವರಾಗೇ ಅಧಿಕಾರ ಬಿಟ್ಟರೆ ರಾಜಕೀಯದಲ್ಲಿ ಬದಲಾವಣೆ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಕುರಿತು ಮಾತನಾಡಿದ ಕೋಡಿಮಠ ಶ್ರೀ ಶಿವಾನಂದ ಸ್ವಾಮೀಜಿ, ನಾನು ಈ ಮೊದಲೇ ಹೇಳಿದ್ದೇನೆ-ಸಂಕ್ರಾಂತಿ ನಂತರ ಬಜೆಟ್ ಆಗುತ್ತದೆ. ಯುಗಾದಿ ಬಳಿಕ ಅವರಾಗೇ ಅಧಿಕಾರ ಬಿಟ್ಟರೆ ರಾಜಕೀಯ ಬದಲಾವಣೆ ಆಗುತ್ತದೆ. ಸದ್ಯಕ್ಕೆ ರಾಜಕಾರಣದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅದೇ ವೇಳೆ, ರಾಜ್ಯದ ಪ್ರಮುಖ ನಾಯಕರ ಬಗ್ಗೆ ಮಾತನಾಡಿದ ಶ್ರೀಗಳು, ಡಿ.ಕೆ. ಶಿವಕುಮಾರ್ ಹಾಗೂ ಡಾ. ಜಿ. ಪರಮೇಶ್ವರ್ ಕೂಡ ಬೇಕಾದವರೆ ಎಂದು ಹೇಳಿ, ಆಗಲಿ ಎಲ್ಲರಿಗೂ ಆಗಲಿ ಎಂದು ಅರ್ಥಪೂರ್ಣವಾಗಿ ಭವಿಷ್ಯ ನುಡಿದರು. ಶ್ರೀಗಳ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.