₹500 ರೂಪಾಯಿ ಬೆಟ್ಟಿಂಗ್ ಕೇಸ್, ಗೃಹ ಸಚಿವ ಪರಮೇಶ್ವರ್​​​ಗೆ ಬಿಗ್ ರಿಲೀಫ್..!

ಬೆಂಗಳೂರು : ಗೃಹ ಸಚಿವ ಪರಮೇಶ್ವರ್ ವಿರುದ್ಧದ 500 ರೂಪಾಯಿ ಬೆಟ್ಟಿಂಗ್ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮಾಷೆಗಾಗಿ ಮಾತನಾಡಿದರೂ ಕೇಸ್ ಹಾಕಬಹುದೇ? ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ. ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಪ್ರಕರಣಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಗೃಹ ಸಚಿವ ಪರಮೇಶ್ವರ್ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

ಕಬಡ್ಡಿ ಟೂರ್ನಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ ₹500 ರೂಪಾಯಿ ಬಾಜಿ ಕಟ್ಟಿ ಸೋತ್ತಿದ್ದರು. ಬಳಿಕ ತಮಾಷೆಗೆ ಬೆಟ್ಟಿಂಗ್ ಕಟ್ಟಿರುವುದನ್ನು ಸಹ ಪರಮೇಶ್ವರ್ ಹೇಳಿಕೊಂಡಿದ್ದರು. ಇದನ್ನು ಹೆಚ್.ಆರ್.ನಾಗಭೂಷಣ್ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್, ಪರಮೇಶ್ವರ್ ವಿರುದ್ಧ ಎಫ್​​ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ಪರಮೇಶ್ವರ್ ಹೈಕೋರ್ಟ್​ ಮೆಟ್ಟಿಲೇರಿದ್ದು, ಪರಮೇಶ್ವರ್ ಪರವಾಗಿ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು.

ಇದನ್ನೂ ಓದಿ : ಜಮೀರ್ ಜೆಡಿಎಸ್‌ಗೆ ಹೋಗೋದಾದ್ರೆ ನಮ್ಮನ್ನೂ ಕರ್ಕೊಂಡ್ ಹೋಗ್ಲಿ : ಬಾಲಕೃಷ್ಣ

ಈ ವಾದ ಆಲಿಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ, ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟು ಪ್ರಕರಣಕ್ಕೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.

ಏನಿದು ಪ್ರಕರಣ..!?
2025ರಲ್ಲಿ ತುಮಕೂರಿನಲ್ಲಿ ನಡೆದಿದ್ದ ಕಬ್ಬಡಿ ಟೂರ್ನಿಯಲ್ಲಿ ಚಿಕ್ಕೋಡಿ ಹಾಗೂ ವಿಜಯಪುರ ನಡುವೆ ಕಬಡ್ಡಿ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಚಿಕ್ಕೋಡಿ ತಂಡ ಗೆಲ್ಲುವುದಾಗಿ ಪರಮೇಶ್ವರ್‌ ಅವರು ₹500 ರೂಪಾಯಿ ಬೆಟ್ಟಿಂಗ್‌ ಕಟ್ಟಿದ್ದರು. ಆದ್ರೆ, ವಿಜಯಪುರ ತಂಡ ಗೆಲುವು ಸಾಧಿಸಿತ್ತು. ಇದರಿಂದ ಪರಮೇಶ್ವರ್ ಸೋತ್ತಿದ್ದರಿಂದ ಡಿಸಿಗೆ ₹500 ರೂಪಾಯಿ ಹಣ ನೀಡಿದ್ದರು. ಇದನ್ನು ಸ್ವತಃ ಪರಮೇಶ್ವರ್ ಅವರೇ ಪ್ರಶಸ್ತಿ ನೀಡುವಾಗ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಕಬಡ್ಡಿ ಪಂದ್ಯದ ವೇಳೆ ನಾನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ ತಮಾಷೆಗಾಗಿ ಬೆಟ್ಟಿಂಗ್ ₹500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದೆ ಎಂದು ಸಚಿವರು ಹೇಳಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Leave a Reply

Your email address will not be published. Required fields are marked *