ಇಂದಿರಾ ಗಾಂಧಿ ನಂತರ ದೇಶದಲ್ಲಿ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಪ್ರಧಾನಿ ಮೋದಿ ಮಾತ್ರ : ಕೆ.ಎನ್.ರಾಜಣ್ಣ

ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ದೇಶದಲ್ಲಿ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮದೇ ಪಕ್ಷದ ನಿಲುವಿಗೆ ವಿರುದ್ಧವಾಗಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇಂದಿರಾ ಗಾಂಧಿ ಅವರ ನಂತರ ಇಡೀ ದೇಶ ಒಪ್ಪಿಕೊಳ್ಳುವಂತಹ ಹಾಗೂ ಅತಿ ಹೆಚ್ಚು ಜನ ಬೆಂಬಲ ಹೊಂದಿರುವ ಏಕೈಕ ನಾಯಕ ಎಂದರೆ ಅದು ನರೇಂದ್ರ ಮೋದಿ ಮಾತ್ರ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ವಕೀಲರ ಕೋಟ್ ಧರಿಸಿ ಹೈಕೋರ್ಟ್​ಗೆ ಬಂದ ಮಮತಾ ಬ್ಯಾನರ್ಜಿಗೆ ಬಾರ್ ಕೌನ್ಸಿಲ್ ಶಾಕ್..!

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವರೊಬ್ಬರು ಪ್ರಧಾನಿ ಮೋದಿಯವರನ್ನು ಕೊಂಡಾಡಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ರಾಜಕೀಯವಾಗಿ ನಾವು ವಿರೋಧಿಸಬಹುದು, ಆದರೆ ಒಬ್ಬ ನಾಯಕನಾಗಿ ಅವರ ಜನಪ್ರಿಯತೆ ಮತ್ತು ದೇಶದ ಮೇಲಿನ ಪ್ರಭಾವವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂಬ ಧಾಟಿಯಲ್ಲಿ ರಾಜಣ್ಣ ಈ ಹೇಳಿಕೆ ನೀಡಿದ್ದಾರೆ.

ನೀವು ಮೋದಿಯನ್ನು ಹೊಗಳಬಿಟ್ಟವ್ನೇ’ ಅಂತ ಬರೆದರೆ ನಮ್ಮವರೆಲ್ಲ ನನ್ನ ಮೇಲೆ ಕಣ್ಣು ಕೆಂಪಗೆ ಮಾಡ್ಕೋತಾರೆ. ನಾನು ವಾಸ್ತವಾಂಶವನ್ನ ಹೇಳುವವನು. ಮೋದಿ ಈಗ ಆಕಾಶದಲ್ಲಿ ಇದ್ದಾರೆ, ಭೂಮಿಗೆ ಬಂದಾಗ ಕಷ್ಟ, ಸುಖ ಎನು ಅಂತ ಗೊತ್ತಾಗುತ್ತೆ ಎಂದರು. ರಾಜಕಾರಣದಲ್ಲಿ ಪಾಪುಲಾರಿಟಿ ಯಾರಿಗೂ ಶಾಶ್ವತವಲ್ಲ. ಅದನ್ನು ಮೊದಲು ಅವರು ಅರಿಯಬೇಕು. ಈ ಹಿಂದೆ ಇಂದಿರಾಗಾಂಧಿಯವರ ಹೆಸರು ಹೇಳಿಕೊಂಡೇ 200 ಜನ ಎಂಪಿಗಳು ಗೆಲ್ಲುತ್ತಿದ್ದರು. ಆದರೆ ಅವರೇ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಸ್ವಯಂ ಸೋಲು ಅನುಭವಿಸಬೇಕಾಯಿತು ಎಂದರು.

Leave a Reply

Your email address will not be published. Required fields are marked *