ಬೆಂಗಳೂರು : ರಾಜ್ಯ ರಾಜಕಾರಣದ ಕ್ಷಿಪ್ರ ಬೆಳವಣಿಗೆಗಳು, ರಾಷ್ಟ್ರ & ಅಂತರಾಷ್ಟ್ರೀಯ ಮಟ್ಟದ ಪ್ರಮುಖ ಸುದ್ದಿಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ 2021ರಲ್ಲಿ ಆರಂಭವಾದ ಪೊಲಿಟಿಕಲ್ 360 ರಾಜಕೀಯ ಸುದ್ದಿ ವಾಹಿನಿ ಸಂಸ್ಥೆ ಇದೀಗ ಯಶಸ್ವಿಯಾಗಿ 5ನೇ ವರ್ಷಕ್ಕೆ ಕಾಲಿಟ್ಟಿದೆ.
ಕಳೆದ ಐದು ವರ್ಷಗಳಲ್ಲಿ ರಾಜಕೀಯ ಬೆಳವಣಿಗೆಗಳು, ಜನಪರ ವಿಚಾರಗಳು, ವಿಧಾನಸಭೆ ಮತ್ತು ಸಂಸತ್ ಚಟುವಟಿಕೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರಮುಖ ಸುದ್ದಿಗಳಿಗೆ ಪೊಲಿಟಿಕಲ್ 360 ತನ್ನದೇ ಆದ ಆದ್ಯತೆ ನೀಡುತ್ತಾ ಬಂದಿದೆ. ಡಿಜಿಟಲ್ ಮಾಧ್ಯಮದ ವೇಗಕ್ಕೆ ತಕ್ಕಂತೆ ಸುದ್ದಿ, ವಿಡಿಯೋ ವರದಿಗಳು, ವಿಶೇಷ ಸಂದರ್ಶನಗಳು ಹಾಗೂ ವಿಶ್ಲೇಷಣಾತ್ಮಕ ಮಾಹಿತಿಯನ್ನು ಪ್ರೇಕ್ಷಕರಿಗೆ ತಲುಪಿಸುವ ಮೂಲಕ ತನ್ನದೇ ಆದ ಡಿಜಿಟಲ್ ಅಸ್ತಿತ್ವವನ್ನು ರೂಪಿಸಿಕೊಂಡಿದೆ.
ಡಿಜಿಟಲ್ ಮಾಧ್ಯಮದ ಜೊತೆ ಇತ್ತೀಚೆಗೆ ಮುದ್ರಣ ಮಾಧ್ಯಮಕ್ಕೂ ಕಾಲಿಟ್ಟಿರುವ ಪೊಲಿಟಿಕಲ್ 360, ರಾಜಕೀಯ ಓದುಗರ ಮನೆ ಬಾಗಿಲಿಗೆ ತಲುಪುತ್ತಿದೆ. ತನ್ನ ಮಂತ್ಲಿ ಮ್ಯಾಗಜಿನ್ ರೂಪದಲ್ಲಿ ನಿಖರ ರಾಜಕೀಯ ವಿಶ್ಲೇಷಣೆ, ಮೂಲಕ ತನ್ನದೇ ಆದ ಓದುಗರನ್ನ ಗಳಿಸಿಕೊಂಡಿದೆ. ‘ರಾಜಿ ಇಲ್ಲದ ಪಯಣ’ ಎಂಬ ಆಶಯದೊಂದಿಗೆ ಐದು ವರ್ಷಗಳ ಪಯಣವನ್ನು ಪೂರ್ಣಗೊಳಿಸಿರುವ ಪೊಲಿಟಿಕಲ್ 360, ಮುಂದಿನ ದಿನಗಳಲ್ಲೂ ವೇಗ, ನಿಖರತೆ ಮತ್ತು ವಿಭಿನ್ನ ಸುದ್ದಿಪ್ರಸ್ತುತಿಯೊಂದಿಗೆ ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ. ಐದು ವರ್ಷಗಳ ಈ ಪಯಣಕ್ಕೆ ಬೆಂಬಲ ನೀಡಿದ ನಾಡಿನ ಓದುಗರು, ವೀಕ್ಷಕರು, ಜಾಹೀರಾತುದಾರರು, ಸುದ್ದಿ ಮೂಲಗಳು ಹಾಗೂ ಹಿತೈಷಿಗಳಿಗೆ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
