ಬೆಂಗಳೂರು : ಡಿಸೆಂಬರ್ನಲ್ಲಿ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಕ್ರಾಂತಿ ಆಗಲಿದೆ. ದೇಶದ ಪ್ರಧಾನಿ ಬದಲಾಗ್ತಾರೆ. ಮೋದಿ ಅಧಿಕಾರದಿಂದ ಇಳಿದು ನಿತಿನ್ ಗಡ್ಕರಿ ಹೊಸದಾಗಿ ಪ್ರಧಾನಿಯಾಗುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ಲಾಡ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಸಚಿವರನ್ನು ಔತಣಕೂಟಕ್ಕೆ ಕರೆದಿರುವುದು ವಿಶೇಷವೇನಿಲ್ಲ. ನಮಲ್ಲಿ ನವೆಂಬರ್ ಕ್ರಾಂತಿ ಎಂಬುದೇನಿಲ್ಲ. ಆದರೆ ಕೇಂದ್ರದಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗುತ್ತಾರೆ. ಬಿಜೆಪಿಯಲ್ಲಿನ ಆಂತರಿಕ ಚರ್ಚೆಗಳನ್ನ ನಾನು ಹೇಳುತ್ತಿದ್ದೇನೆ. ಮೋದಿ ಅವರ ವಿರುದ್ಧ ಬಿಜೆಪಿಯ ನಾಯಕರಾಗಲಿ, ಮಾಧ್ಯಮದವರಾಗಲಿ ಮಾತನಾಡಲು ಅವಕಾಶ ಇಲ್ಲದಂತಹ ವಾತಾವರಣವಿದೆ. ಹೀಗಾಗಿ ಡಿಸೆಂಬರ್ ಒಳಗಾಗಿ ಅವರ ಬದಲಾವಣೆಯಾಗುತ್ತದೆ ಎಂದರು. ಇನ್ನು ಪ್ರಧಾನಿಯವರು ತಮ್ಮ ಹುದ್ದೆಯ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ವಿದೇಶಗಳಿಗೆ ಹೋದರೆ ಏನೋ ಒಂದು ಮಾತನಾಡುತ್ತಾರೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಾಗ ಪ್ರಾಸ ಬದ್ದವಾಗಿ ಮಾತನಾಡುತ್ತಾರೆ. ಇದು ಪ್ರಧಾನಿ ಅವರ ಕೆಲಸವೇ? ಎಂದು ಆಕ್ಷೇಪ ವ್ಯಕ್ತಪಡಿಸಿದರು.