ನವದೆಹಲಿ : ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು. ಬಿಹಾರಕ್ಕೆ ಇಂದು ನಿರ್ಣಾಯಕ ದಿನವಾಗಲಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಲಿದೆ.
ನಿತೀಶ್ ಕುಮಾರ್ ಒಂದೆಡೆ ವಿಜಯವನ್ನು ಘೋಷಿಸಿದ್ದರೆ, ಮತ್ತೊಂದೆಡೆ ತೇಜಸ್ವಿ ಯಾದವ್ ಕೂಡ ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ. ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎಗೆ ಮಹಿಳೆಯರು ಮತ್ತು ಒಬಿಸಿಗಳಿಂದ ಹೆಚ್ಚು ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತವೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 122 ಅನ್ನು ಯಾರು ತಲುಪಲಿದ್ದಾರೆ? ಬಿಹಾರದ ಜನಾದೇಶ ಯಾರಿಗೆ? ಕಾದು ನೋಡಬೇಕಿದೆ.