‘ಕೊಟ್ಟ ಮಾತು’… ಡಿಕೆ ಬ್ರದರ್ಸ್‌ಗೆ ಸಿಎಂ ಸಿದ್ದರಾಮಯ್ಯ ನೇರ ಟಾಂಗ್

ಹಾಸನ : ರಾಜ್ಯ ರಾಜಕಾರಣದಲ್ಲಿ ಕರ್ಚಿ ಕದನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ, ಕೊಟ್ಟ ಮಾತಿನ ಪ್ರಶ್ನೆ ಎತ್ತಿದ್ದ ಡಿಕೆ ಬ್ರದರ್ಸ್‌ಗೆ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ನಾನು ಯಾರಿಗೂ ಮಾತು ಕೊಡಲ್ಲ. ಒಂದುವೇಳೆ ಕೊಟ್ರೆ, ಕೊಟ್ಟ ಮಾತು ಮರೆಯಲ್ಲ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಡಿಕೆ ಸುರೇಶ್‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ : ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ: ರಾಜಣ್ಣ ಲೇವಡಿ

ಇನ್ನು ನಾವು ಅಧಿಕಾರಕ್ಕೆ ಬಂದು 2 ವರ್ಷ 6 ತಿಂಗಳು ತುಂಬಿದೆ. ಈ ಅವಧಿಯಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. 2013 ರಿಂದ 2018ರ ವರೆಗೆ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಹಾಗೂ 2023 ರಿಂದ ಇಲ್ಲಿಯವರೆಗೆ ನಾವು ಏನೇನು ಭರವಸೆಗಳನ್ನು ಕೊಟ್ಟಿದ್ದೇವೇಯೋ ಆ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ.

2013-18 ರವರೆಗೆ 165 ಭರವಸೆಗಳನ್ನು ಕೊಟ್ಟಿದ್ದೆವು. ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023 ರಿಂದ ಇಲ್ಲಿವರೆಗೆ 498 ಭರವಸೆಗಳನ್ನು ಕೊಟ್ಟಿದ್ದೆವು. 242 ಭರವಸೆಗಳನ್ನು ಈಡೇರಿಸಿದ್ದೇವೆ.

ಚುನಾವಣೆಗಿಂದ ಮುಂಚಿತವಾಗಿ ನಾನು, ಡಿಕೆ ಶಿವಕುಮಾರ್‌ ಹಾಗೂ ಸುರ್ಜೇವಾಲಾ ಅವರು ನಾವು ಅಧಿಕಾರಕ್ಕೆ ಬಂದ ತಕ್ಷಣವೇ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಅದರಂತೆ 2023 ಮೇ 20 ರಂದು ಅಧಿಕಾರಕ್ಕೆ ಬಂದೆವು. ಜೂನ್‌ 11 ರಂದು ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಇಲ್ಲಿವರೆಗೆ ಸುಮಾರು 600 ಕೋಟಿಗೂ ಹೆಚ್ಚು ಮಹಿಳೆಯವರು ಫ್ರೀಯಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ.

ಹಾಸನ ಟೂರಿಸಂ ಇರುವಂತಹ ಜಿಲ್ಲೆ. ಕೃಷ್ಣಬೈರೇಗೌಡರು ಹಲವು ಮನವಿಗಳನ್ನು ಮಾಡಿದ್ದಾರೆ. ಹೇಮಾವತಿ ಜಲಾಶಯದ ಕೆಳಗಡೆ 700ಎಕರೆ ಜಾಗ ಇದೆ ಅದನ್ನು ಪಾರ್ಕ್‌ ಮಾಡಿ ಎಂದಿದ್ದಾರೆ. ಅದರ ಪರಿಶೀಲನೆ ಮಾಡಿ ಕಾರ್ಯಕ್ರಮ ಜಾರಿ ಮಾಡಿವ ಪ್ರಯತ್ನ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಸಾಮಾನ್ಯವಾಗಿ ನಾನು ಮಾತು ಕೊಡಲ್ಲ.. ಆದರೆ ಕೊಟ್ಟ ಮೇಲೆ ಆ ಕೆಲಸವನ್ನು ಮಾಡಿಯೇ ಮಾಡುತ್ತೇವೆ. ಕರ್ನಾಟಕದ ಇತಿಹಾಸಲ್ಲಿ ಯಾವುದಾದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಅದು ಕಾಂಗ್ರೆಸ್‌ ಸರ್ಕಾರ ಮಾತ್ರ ಎಂದು ಸಿಎಂ ಹೆಮ್ಮೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *