ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವು ಕುರ್ಚಿ ಕದನದ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಬಿಗ್ ಬಾಸ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ರೀತಿ ಸತೀಶ್ ಜಾರಕಿಹೊಳಿ ಮತ್ತು ಡಾ. ಜಿ. ಪರಮೇಶ್ವರ್ ವೈಲ್ಡ್ ಕಾರ್ಡ್ ಎಂಟ್ರಿಗೆ ಕಾಯುತ್ತಿದ್ದಾರೆ ಎಮದು ಲೇವಡಿ ವಾಡಿದ್ದಾರೆ.
ಇಬ್ಬರೂ ದಲಿತರ ಬ್ರಾಂಡ್ ಅಂತೆ. ಇದು ಕಾಂಗ್ರೆಸ್ ಬಿಗ್ ಬಾಸ್ ರಿಯಾಲಿಟಿ ಶೋನ ಆದ್ರೆ ಕಾಂಗ್ರೆಸ್ನದ್ದು ರಿಯಲ್ ಶೋ. ಬ್ರೇಕ್ ಫಾಸ್ಟ್ ಬಳಿಕ ಸಿದ್ಧರಾಮಯ್ಯ ಖುಷಿಯಾಗಿ ಮಾತಾಡುತ್ತಿದ್ದರು, ಡಿ.ಕೆ. ಶಿವಕುಮಾರ್ ಡಲ್ ಆಗಿದ್ದರು. ಇವರ ಬ್ರೇಕ್ ಫಾಸ್ಟ್ ಮೀಟಿಂಗ್ ಬ್ರೇಕ್ ಆಗಿದೆ. ಸರ್ಕಾರ ರೈತರ, ಐಟಿ ಉದ್ಯಮಿಗಳ, ಜನರ ವಿಶ್ವಾಸ ಕಳೆದುಕೊಂಡಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ 8 ರಿಂದ 18 ರವರೆಗೆ ಪ್ಯಾಚಪ್ ಅಷ್ಟೇ. ಬಿಗ್ಬಾಸ್ನಲ್ಲಿ ಜಗಳ ಆಡುವಂತೆ ಇಲ್ಲಿ ಜಗಳ ಆಡುತ್ತಿದ್ದಾರೆ. ಇದು ಕಾಂಗ್ರೆಸ್ ಬಿಗ್ ಬಾಸ್. ಈ ಬಿಗ್ ಬಾಸ್ ಪ್ರಾಯೋಜಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಅಂತ ಅಶೋಕ್ ವ್ಯಂಗ್ಯವಾಡಿದ್ರು.
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು..!
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಭಗವಂತನು ಅಂತಾ ಡಿ.ಕೆ. ಶಿವಕುಮಾರ್ ಡೈಲಾಗ್ ಹೊಡೆದ್ರು. ನಾನು ಯಾರಿಗೂ ಮಾತು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ರು. ಮಾತುಕತೆ ಬಿಟ್ಟು ಇದು ಟ್ವೀಟ್ ವಾರ್ಗೆ ಹೋಗಿದೆ. ಇವರಿಗೆ ನಾಟಿ ಕೋಳಿ ಸಾರು, ಇಡ್ಲಿ ವಡೆ ಸಾಂಬರ್. ಪಾಪ ಪರಮೇಶ್ವರ್ ದೂರದಲ್ಲಿ ನಿಂತು ಸಾಂಬಾರ್ ವಾಸನೆ ನೋಡುತ್ತಿದ್ದಾರೆ ಅಷ್ಟೇ. ವೈಲ್ಡ್ ಕಾರ್ಡ್ನವರನ್ನು ಇನ್ನೂ ಹತ್ತಿರಕ್ಕೂ ಬಿಟ್ಟು ಕೊಂಡಿಲ್ಲ. ಬಿಗ್ ಬಾಸ್ನಲ್ಲಿ ವೈಲ್ಡ್ ಕಾರ್ಡ್ನಲ್ಲಿ ಬಂದವರೇ ವಿನ್ ಆಗಿದ್ದಾರೆ. ವೀರೇಂದ್ರ ಪಾಟೀಲ್ ಇದ್ದಾಗ ಗುಂಡೂರಾವ್ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದರು. ಕಾಂಗ್ರೆಸ್ ಅಂದರೆ ವೈಲ್ಡ್ ಅಂತ. ಕಾಂಗ್ರೆಸ್ ಬಿಗ್ಬಾಸ್ ಬಿಟ್ಟು ಆಚೆ ಹೋಗುತ್ತಿಲ್ಲ. ನಾಟಿ ಕೋಳಿ, ತಟ್ಟೆ ಇಡ್ಲಿ ಇಷ್ಟೇ. ಇವರಲ್ಲಿ ಹುಲಿ ಯಾರು, ಗೋವು ಯಾರು ಅಂತಾ ಅಧಿವೇಶನದಲ್ಲಿ ಕೇಳುತ್ತೇನೆ ಎಂದು ಆರ್.ಅಶೋಕ್ ಟೀಕಿಸಿದ್ರು.
ಬೆಂಗಳೂರು ಟ್ರಾಫಿಕ್ ಬಗ್ಗೆ ಉತ್ತರ ಪ್ರದೇಶದ ಎಸ್ಪಿ ಸಂಸದ ರಾಜೀವ್ ರಾಯ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಅಲ್ಲಿ ರಾಜೀವ್ ರಾಯ್ ಭದ್ರತೆ ಪಡೆದುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ರಸ್ತೆ ಗುಂಡಿ ಬಗ್ಗೆ ಮಾತಾಡಿದ್ದಕ್ಕೆ ಡಿ.ಕೆ.ಶಿವಕುಮಾರ್ ರಾಜೀವ್ ಅವರಿಗೂ ಧಮ್ಕಿ ಹಾಕಬಹುದು. ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಷಾಗೆ ಧಮ್ಕಿ ಹಾಕಿದಂತೆ ಹಾಕಬಹುದು ಎಂದರು.