ಏಯ್.. ಕರಿ ಟೋಪಿ MLA ಇಲ್ಲಿ ಬಾ… ಡಿಕೆಶಿ- ಮುನಿರತ್ನ ನಡುವೆ ಹೈಡ್ರಾಮಾ..!

ಬೆಂಗಳೂರು: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ ನಡೆಸಿದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮವೇ ನಡೆದುಹೋಗಿದೆ.

ಪಾರ್ಕ್​​ನಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಮುನಿರತ್ನ ಜನರ ನಡುವೆಯೇ ಗಣವೇಷಧಾರಿಯಾಗಿ ಕುಳಿತಿದ್ದರು. ಈ ವೇಳೆ ವೇದಿಕೆ ಮೇಲೆ ಬರುವಂತೆ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ಕರೆಯುತ್ತಾರೆ. ಏಯ್‌ ಕರಿಟೋಪಿ ಎಂಎಲ್​ಎ ಬಾರಯ್ಯ ಇಲ್ಲಿಗೆ ಎಂದು ಕರೆದರು. ಅದಕ್ಕೆ ಶಿವಕುಮಾರ್​ ವಿರುದ್ಧ ಶಾಸಕ ಮುನಿರತ್ನ ಸಿಡಿದೆದ್ದಿದ್ದಾರೆ. ನನಗೆ ಆಹ್ವಾನ ಇಲ್ಲ, ನಾನು ಇಲ್ಲಿಗೆ ಎಂಎಲ್‌ಎ ಆಗಿ ಬಂದಿಲ್ಲ, ಕ್ಷೇತ್ರದ ಒಬ್ಬ ಸಾರ್ವಜನಿಕನಾಗಿ ಬಂದಿದ್ದೀನಿ ಜನ ಮಧ್ಯವೇ ಕೂತ್ಕೋತೀನಿ ಎಂದು ಮುನಿರತ್ನ ಹೇಳ್ತಾರೆ. ಒಂದು ಎಂಪಿ , MLA ಫೋಟೋ ಇಲ್ಲ. ಇಲ್ಲಿ ರಾಜಕೀಯ ಮಾಡೋಕೆ ಬರಬೇಡಿ ಎಂದು ಮುನಿರತ್ನ ಅಧಿಕಾರಿಗಳ ಮೇಲೂ ಕೋಪಗೊಂಡಿದ್ದಾರೆ.

ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರ್​.ಆರ್.ನಗರ ಶಾಸಕ ಮುನಿರತ್ನ ಡಿಕೆಶಿ ವಿರುದ್ಧ ಆರೋಪ ಮಾಡಿದರು. ನನಗೆ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ. ಇದು ಜಿಬಿಎ ಎಲೆಕ್ಷನ್ ಗೆಲ್ಲೋದಕ್ಕೆ ಮಾಡ್ತಿರುವ ಗಿಮಿಕ್. ನಾನು ಕೇಳಿದ್ದಕ್ಕೆ ನನ್ನ ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಸೋತ ಅಭ್ಯರ್ಥಿಯನ್ನ ಕರೆ ತಂದು ಕ್ಷೇತ್ರವನ್ನು ಹಾಳು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಈ ರೀತಿಯಲ್ಲಿ ಕ್ಷೇತ್ರವನ್ನ ಹಾಳು ಮಾಡೋದು ಎಷ್ಟು ಸರಿ? ಕೌನ್ಸಿಲರ್ ಆಗಬೇಕು ಅನ್ನೋರನ್ನ ಕರೆ ತರುತ್ತಿದ್ದಾರೆ. ಅವರಿಂದಲೇ ದೂರು ಕೊಡಿಸಿ ಗೆಲ್ಲೋದಕ್ಕೆ ಯತ್ನಿಸ್ತಿದ್ದಾರೆ. ನನಗೆ ಒಂದೇ ಒಂದು ಆಹ್ವಾನ ಕೂಡ ಅವ್ರು ಕೊಟ್ಟಿಲ್ಲ. ಯಾವ ದೇವಸ್ಥಾನಕ್ಕೆ ಕರೆದ್ರೂ ಬಂದ್ರೂ ಪ್ರಮಾಣ ಮಾಡ್ತೀನಿ. RSS ಕಾರ್ಯಕ್ರಮ ಮುಗಿಸಿ ಬಂದ್ರೆ ಕರೀ ಟೋಪಿ ಅಂತಾರೆ. ಏಯ್ ಟೋಪಿ ಬಾರೋ ಇಲ್ಲಿ ಅಂತ ಅವರು ಕರೆಯುತ್ತಾರೆ. ಒಬ್ಬ ಎಂಎಲ್​ಎಗೆ ಈ ರೀತಿಯಲ್ಲಿ ಯಾರಾದ್ರೂ ಕರೆಯುತ್ತಾರಾ? ಇದು ನನಗೆ ಮಾಡಿದ ಅವಮಾನವಲ್ಲ, ಜನರಿಗೆ ಮಾಡಿದ್ದು.

ಆರ್.ಆರ್. ನಗರ ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ಇಡೀ ಬೆಂಗಳೂರು ಹಾಳಾಗಿ ಹೋಗಿದ, ಜನ್ರನ್ನ ಓಡಿಸ್ತಾರೆ. ಐಟಿ, ಬಿಟಿ ಜನ ಹೋಗ್ತೀವಿ ಅಂದ್ರೆ ಹೋಗಿ ಅಂತಾರಲ್ಲ. ಅವ್ರ ತಮ್ಮನನ್ನ ಸೋಲಿಸಿದ್ದಕ್ಕೆ ಹೀಗೆಲ್ಲಾ ಮಾಡ್ತಿರೋದು. ಅಡ್ಜಸ್ಟ್​ಮೆಂಟ್ ಮಾಡಿಕೊಂಡಿದ್ರೆ ಇದೆಲ್ಲಾ ಆಗ್ತಿರಲಿಲ್ಲ. ಎಷ್ಟು ಮನೆಗಳನ್ನ ಇವ್ರು ಹಾಳು ಮಾಡೋದು? ಅವ್ರಿಗೂ ಸಂಸಾರ ಇಲ್ವಾ? ಸಂಸ್ಕೃತಿ ಯಾರದು ಅಂತ ಇದರಿಂದ ಗೊತ್ತಾಗಲ್ವಾ? ಎಂಎಲ್​ಎಗೆ ಏಯ್ ಟೋಪಿ ಅನ್ನೋದು ಸಂಸ್ಕೃತಿ. ಪೊಲೀಸರು ಏನ್ಮಾಡ್ತಾರೆ? ಪ್ರತಿ ಸ್ಟೇಷನ್​ಗೆ ಬಿಡ್ಡಿಂಗ್ ನಡೀತಿದೆ. ಸಂಸದರು, ಶಾಸಕರನ್ನ ಸರ್ಕಾರಿ ಕಾರ್ಯಕ್ರಮಕ್ಕೆ ಕರೀಬೇಕು. ಆದ್ರೆ ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *